ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಕಬ್ಬಿಣದ ತಡೆಯನ್ನು ಮುರಿದು ಹಾಕಿ ಸರಕಾರಕ್ಕೆ ಸಾವಿರಾರು ರೂ.ನಷ್ಟ

ಪಾಣೆಮಂಗಳೂರು ಸೇತುವೆ ಮೇಲೆ ಸಂಚಾರ ನಿಷೇಧ ಹೇರಿ ಹಾಕಲಾದ ಕಬ್ಬಿಣದ ತಡೆಯನ್ನು ಮುರಿದು ಸರಕಾರಕ್ಕೆ ಸಾವಿರಾರು ರೂಪಾಯಿ ನಷ್ಟ ಉಂಟು ಮಾಡಿದ ವಾಹನ ಚಾಲಕನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ನಝೀರ್ ಅಹಮದ್ ಅವರು ದೂರು ನೀಡಿದ್ದಾರೆ.

 

ಬಂಟ್ವಾಳ ತಾಲೂಕು ಬಿ ಮೂಡಾ ಗ್ರಾಮದ ಹಳೇ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್. 48 ರ ಸೇತುವೆಯನ್ನು 2004-05 ರಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ವಹಣೆ ಮತ್ತು ದುರಸ್ಥಿ ಬಗ್ಗೆ ಪುರಸಭೆಗೆ ಹಸ್ತಾಂತರಿಸಿದ್ರು. ಇದು ಸ್ವಾತಂತ್ರ‍್ಯ ಪೂರ್ವ ಕಾಲದ ಸೇತುವೆಯಾಗಿದ್ದು, ಈ ಹಳೆಯ ಸೇತುವೆಯಲ್ಲಿ ಪ್ರಸ್ತುತ ಸರಕಾರ ಘನ ವಾಹನ ಸಂಚಾರವನ್ನು ನಿರ್ಬಂಧಿಸಿ ರಸ್ತೆಯ 2 ಬದಿಗಳಲ್ಲಿ ಕಬ್ಬಿಣದ ತಡೆಗಳನ್ನು ಹಾಕಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ರಸ್ತೆಯಲ್ಲಿ ಸಾವರ್ಜನಿಕ ಲಘು ವಾಹನಗಳು ಮಾತ್ರ ಸಂಚರಿಸುತ್ತಿರುವುದಾಗಿದೆ.

 

ಜೂನ್. 9 ರಂದು ಕೆಎ.19.ಎಇ.5621 ನೇ ವಾಹನವನ್ನು ಅದರ ಚಾಲಕರು ಸೇತುವೆಯ ಧಾರಣ ಸಾಮರ್ಥ್ಯ ದ ಬಗ್ಗೆ ಆಳವಡಿಸಿದ ಕಬ್ಬಿಣದ ತಡೆಯನ್ನು ಮುರಿದು ಹಾಕಿ ಸರಕಾರಕ್ಕೆ ಸುಮಾರು ರೂ 80,000 ದಷ್ಟು ನಷ್ಟವನ್ನು ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾವರ್ಜನಿಕ ಸೇತುವೆಯ ಉಪಯೋಗಕ್ಕೆ ಆಳವಡಿಸಿದ ಧಾರಣ ಸಾಮರ್ಥ್ಯ ದ ಬಗ್ಗೆ ಆಳವಡಿಸಿದ ಕಬ್ಬಿಣದ ತಡೆಯನ್ನು ಮುರಿದು ಸರಕಾರಕ್ಕೆ ನಷ್ಟ ಉಂಟು ಮಾಡಿದ ವಾಹನ ಮತ್ತು ಚಾಲಕರ ಮೇಲೆ ಕಾನೂನು ಕ್ರಮಕೈಗೊಳ್ಳವಂತೆ ಮುಖ್ಯಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ಮಂಗಳೂರು: ರಾಜಾಜಿ ಉದ್ಯಾನವನದಲ್ಲಿ ಗಾಂಧಿ ಜಯಂತಿ ಆಚರಣೆ

ಸುಳ್ಯ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸುಳ್ಯ ಪೊಲೀಸರ ವಶಕ್ಕೆ…!

ಕಾಸರಗೋಡು: ಮುಗುರೋಡ್‌ನಲ್ಲಿ ಕಾರು-ಬೈಕ್ ಅಪಘಾತ: ಬೈಕ್ ಸವಾರ ಸಾವು, ಪತ್ನಿಗೆ ಗಂಭೀರ ಗಾಯ..!

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ: ಇಬ್ಬರು ಆರೋಪಿಗಳ ಬಂಧನ…!

error: Content is protected !!