ಜನ ಮನದ ನಾಡಿ ಮಿಡಿತ

Advertisement

ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಘೋಷಣೆ

ಅಹ್ಮದಾಬಾದ್‌ನ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು ಈ ವಿಮಾನದಲ್ಲಿ ಸುಮಾರು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಆದರೆ ಈ ದುರಂತದಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿರುವ ಮಾಹಿತಿ ಲಭ್ಯ ಆಗಿದೆ.

ಇನ್ನು, ಟಾಟಾ ಗ್ರೂಪ್, ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ದುಃಖ ವ್ಯಕ್ತಪಡಿಸಿದ್ದು, ಇದರಲ್ಲಿ ಜೀವ ಕಳೆದುಕೊಂಡ ಎಲ್ಲಾ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಘೋಷಣೆ ಮಾಡಿದೆ. ಗ್ರೂಪ್ ಅಧ್ಯಕ್ಷ ಎನ್.ಚಂದ್ರಶೇಖರನ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಏರ್ ಇಂಡಿಯಾ ಫ್ಲೈಟ್-171 ದುರಂತದಿAದ ತೀವ್ರ ನೋವಾಗಿದೆ. ತಮ್ಮ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ.

ಇನ್ನು ಟಾಟಾ ಗ್ರೂಪ್ ಸಂತ್ರಸ್ತ ಪ್ರತಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಅಗತ್ಯ ಆರೈಕೆ ಮತ್ತು ಸಹಾಯವನ್ನು ಖಚಿತಪಡಿಸುವುದರ ಜೊತೆಗೆ ವೈದ್ಯಕೀಯ ವೆಚ್ಚವನ್ನೂ ಭರಿಸುವುದಾಗಿ ಟಾಟಾ ಗ್ರೂಪ್ ತಿಳಿಸಿದೆ. ಜೊತೆಗೆ ಬಿಜೆ ಮೆಡಿಕಲ್‌ನ ಹಾಸ್ಟೆಲ್ ನಿರ್ಮಾಣಕ್ಕೂ ಸಹಾಯ ನೀಡಲಾಗುವುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!