ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಪ್ರಗತಿಪರ ರೈತ ಹಾಗೂ ಸಮಾಜಸೇವಕ 79ರ ಇಳಿ ವಯಸ್ಸಿನ ಯಡ್ತಾಡಿ ಸತೀಶಕುಮಾರ ಶೆಟ್ಟಿ ಅವರು ಯೋಗ ಧ್ಯಾನ ಹಾಗೂ ಪ್ರಾಣಾಯಾಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊ0ಡಿದ್ದಾರೆ.
ತಾವು 1983 ರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಯೋಗ ವಿಭಾಗದಿಂದ ವೈಜ್ಞಾನಿಕವಾಗಿ ಯೋಗ ಕಲಿತು ಪ್ರತಿದಿನ ತಪ್ಪದೇ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಘಂಟೆ ಯೋಗಾಭ್ಯಾಸ ಮಾಡುತ್ತಿದ್ದು ತಮ್ಮ ಆರೋಗ್ಯ ಕಾಪಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಇವರು ಹಲವಾರು ಯೋಗ ಶಿಬಿರಗಳಲ್ಲಿ ಭಾಗವಹಿಸಿ ಯೋಗದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಲಹೆ ಸೂಚನೆ ನೀಡಿರುತ್ತಾರೆ. ನಮ್ಮ ದೇಶದ ಪ್ರಾಚೀನ ಋಷಿ ಪರಂಪರೆಯಿ0ದ ಬಂದ ಈ ಜ್ಞಾನ ಭಂಡಾರದ ಕುರಿತು ಹಲವಾರು ಪುಸ್ತಕಗಳನ್ನು ಓದಿ ಅದರ ಪ್ರಯೋಜನ ಪಡೆದಿರುತ್ತಾರೆ. ತಮ್ಮ ಮಕ್ಕಳಿಗೂ ಚಿಕ್ಕಂದಿನಲ್ಲೇ ಯೋಗಾಭ್ಯಾಸದ ಕುರಿತು ಆಸಕ್ತಿ ಹುಟ್ಟಿಸಿರುತ್ತಾರೆ. ಯೋಗ ಅಭ್ಯಾಸವನ್ನು ನುರಿತ ಗುರುಗಳಿಂದಲೇ ಅವರ ಮಾರ್ಗದರ್ಶನದಲ್ಲಿ ಯೋಗ ಕಲಿಯಬೇಕೆಂದು ಅವರ ಸಲಹೆ. ಯೋಗಾಭ್ಯಾಸವನ್ನು ಎಂಟು ವರ್ಷದ ಮಕ್ಕಳ ನಂತರ ವೃದ್ಧರೂ ಅತಿವೃದ್ಧರೂ ವ್ಯಾಧಿತರೂ ದುರ್ಬಲರೂ ಅವರವರ ಶಕ್ತ್ಯಾನುಸಾರ ನಿರಂತರ ಮಾಡಿದಲ್ಲಿ ಸಿದ್ಧಿಯನ್ನು ಪಡೆಯಬಹುದು. ಪ್ರತಿದಿನ ಬೆಳಿಗ್ಗೆ ಶೌಚ, ದಂತ ಧಾವನಾದಿಗಳನ್ನು ತೀರಿಸಿ, ಪ್ರಶಾಂತ ಗಾಳಿ ಬೆಳಕು ಇರುವ ವಾತಾವರಣದಲ್ಲಿ ಯೋಗ ಪ್ರಾಣಾಯಾಮ ಧ್ಯಾನ ಮಾಡತಕ್ಕದ್ದು. ಸಹನೆ, ಶ್ರದ್ಧೆ, ಮಿತ ಆಹಾರ, ತಾಳ್ಮೆಯಿಂದ ಯೋಗಾಭ್ಯಾಸ ಮಾಡಿದಲ್ಲಿ ತುಂಬಾ ಪ್ರಯೋಜನ ಪಡೆಯಬಹುದು ಎಂದು ಶೆಟ್ಟರ ಅಭಿಪ್ರಾಯ. ತನ್ನ ನಿರಂತರ ಯೋಗ ಸಾಧನೆಗೆ ಸಹಕರಿಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾಕ್ಟರ್ ಮಂಜುನಾಥ ಹಂದೆ ಅಲ್ಲದೆ ತಮ್ಮ ಕುಟುಂಬ ವೈದ್ಯರಾದ ಡಾಕ್ಟರ್ ರಾಮಚಂದ್ರ ಬಾಯಿರಿ ಹಾಗೂ ಮಣಿಪಾಲದ ಯೋಗ ಕೇಂದ್ರದವರಿಗೂ ಅವರು ತಮ್ಮ ಕೃತಜ್ಞತೆ ವ್ಯಕ್ತಪಡಿಸಿರುತ್ತಾರೆ. ನಮ್ಮ ಪ್ರಧಾನಮಂತ್ರಿ ಮೋದಿ ಅವರು ಪ್ರತಿವರ್ಷ ಜೂನ್ 21ರಂದು ವಿಶ್ವಯೋಗ ದಿನವೆಂದು ಘೋಷಿಸಿದ್ದು ಅದು ಈಗ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈ ವಿಶ್ವಯೋಗ ದಿನದ ಪ್ರಯೋಜನವನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿಶ್ವ ಯೋಗ ದಿನಾಚರಣೆಯ ಸಂದರ್ಭ ಸಂದೇಶ ನೀಡಿರುತ್ತಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…