ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಅಪರೂಪದ ಚಿಪ್ಪು ಹಂದಿಗೆ ಜೀವದಾನ: 50 ಅಡಿ ಬಾವಿಯಿಂದ ರಕ್ಷಣೆ

ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿಯಲ್ಲಿ 50 ಅಡಿ ಆಳದ ಬಾವಿಗೆ ಬಿದ್ದ ಅಪರೂಪದ ಚಿಪ್ಪು ಹಂದಿಯನ್ನ ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಕಾರದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಸಂಜೆಯ ವೇಳೆಗೆ ಈ ಘಟನೆ ಬೆಳಕಿಗೆ ಬಂದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿತಿನ್ ಹಿರಿಯಡ್ಕ ಅವರು ತಕ್ಷಣವೇ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರಿಗೆ ವಿಷಯ ತಿಳಿಸಿದ್ರು. ಕುಲಾಲ್ ಅವರು ಅರಣ್ಯ ಇಲಾಖೆಯ ತಂಡವನ್ನು ಸ್ಥಳಕ್ಕೆ ಕರೆದೊಯ್ದರು. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸತತ ಪ್ರಯತ್ನದ ಫಲವಾಗಿ, ನೀರೆಯ ಸುನಿಲ್ ಎಂಬವರು ಬಾವಿಗೆ ಇಳಿದು 20 ಅಡಿ ಆಳದಲ್ಲಿದ್ದ ಚಿಪ್ಪು ಹಂದಿಯನ್ನು ಹಿಡಿದು ಮೇಲಕ್ಕೆತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ವೀರೆಶ್, ಅರಣ್ಯ ರಕ್ಷಕರು ಪ್ರವೀಣ್, ಶ್ರೀಧರ್ ನರೇಗಲ್ ಸೇರಿದಂತೆ ಹಲವರು ಭಾಗವಹಿಸಿದ್ರು. ಅನಂತರ, ಚಿಪ್ಪು ಹಂದಿಯನ್ನು ಸುಸ್ಥಿತಿಯಲ್ಲಿ ಹಿಡಿದು, ಬಯಲು ಪ್ರದೇಶದ ರಕ್ಷಿತ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು. ಚಿಪ್ಪು ಹಂದಿ ಒಂದು ಸಸ್ತನಿ ಆಗಿದ್ದು, ಮಣ್ಣು ಮತ್ತು ಮರದ ಪೊಟರೆಗಳಲ್ಲಿ ವಾಸವಿದ್ದು, ಇರುವೆ ಮತ್ತು ಗೆದ್ದಲುಗಳನ್ನು ಆಹಾರವನ್ನಾಗಿಸಿಕೊಂಡು ಬದುಕುತ್ತದೆ. ಇದು ಏಶ್ಯಾ ಮತ್ತು ಯುರೋಪ್ ಖಂಡದಲ್ಲಿ ಕಂಡುಬರುವ ಅಪರೂಪದ ಪ್ರಾಣಿಯಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!