ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಹಲವಾರು ಆಪ್‌ಗಳಲ್ಲಿ ಸಾಲ ಪಡೆದಿದ್ದ ಯುವಕನ ಆತ್ಮಹತ್ಯೆ

ಅರ್ಥಿಕ ಹೊರೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೋಡಿಕಲ್‌ನಲ್ಲಿ ಜೂ. 24 ರಂದು ಮಂಗಳವಾರ ನಡೆದಿದೆ.

ಮೃತ ಯುವಕ ಕೋಡಿಕಲ್ ನ ನಿವಾಸಿ ನಿಖಿಲ್ ಪೂಜಾರಿ (30) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಯುವಕ ಮನೆಯಲ್ಲಿ ಉಪಹಾರ ಸೇವಿಸಿ ಕೋಣೆಗೆ ಹೋಗಿದ್ದ. ಈತ ಸಂಜೆ ಮಲಗುವ ಅಭ್ಯಾಸ ಹೊಂದಿದರಿ0ದ್ದ ಮನೆಯವರು ಆತನ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಸಂಜೆಯಾದರೂ ಕೋಣೆಯಿಂದ ಹೊರಬಾರದ ಹಿನ್ನೆಲೆ ಮನೆಯವರು ಬಾಗಿಲು ಬಡಿದರೂ, ಕರೆದರೂ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ರಾತ್ರಿ 8.15ರ ವೇಳೆಗೆ ಬಾಗಿಲಿನ ಎಡೆಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಪ್ರಾಥಮಿಕ ತನಿಖೆಯಿಂದ ಅರ್ಥಿಕ ಹೊರೆಯಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಈತ ವಿವಿಧ ಆಪ್ ಗಳಲ್ಲಿ ಸಾಲ ಪಡೆದಿದ್ದು, ಹಿಂತಿರುಗಿಸಲು ಸಾಧ್ಯವಾಗದೆ ಸಾವಿಗೆ ಶರಣಾದ ಎನ್ನಲಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಕಿಬ್ ನಬಿ ಎಂಟ್ರಿ

ಬಿಹಾರದ ಸಹರ್ಸಾದಲ್ಲಿ ರೈಲು ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

error: Content is protected !!