ಜನ ಮನದ ನಾಡಿ ಮಿಡಿತ

Advertisement

ಬೆಂಗಳೂರು: ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದು ಜೀವ ಕಳೆದುಕೊಂಡ ವೃದ್ಧ ದಂಪತಿ

ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಜೀವ ಕಳೆದುಕೊಂಡಿದ್ದಾರೆ.

ಜೆಪಿ ನಗರದ 8ನೇ ಹಂತದ ವೃದ್ಧಾಶ್ರಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಮೂರ್ತಿ (81) ಇವರ ಪತ್ನಿ ರಾಧ (74) ನೇಣು ಬಿಗಿದುಕೊಂಡು ಸಾವಿಗೆ ಶರಣಾದ ದಂಪತಿ. ಈ ವೃದ್ಧ ದಂಪತಿ ಸೊಸೆ ಜೊತೆ ಹೊಂದಾಣಿಕೆ ಇರದ ಕಾರಣ ಬೇರೆ ಮನೆ ಮಾಡಿಕೊಡಲು ಮಗನಿಗೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ 2021ರಲ್ಲಿ ಬ್ಯಾಟರಾಯನಪುರ ವೃದ್ಧಾಶ್ರಮಕ್ಕೆ ತಂದೆ ತಾಯಿಯನ್ನು ಸೇರಿಸಿದ್ದನು. ಬಳಿಕ 2023ರಲ್ಲಿ ವಾಪಸ್ ಮನೆಗೆ ತಂದೆ, ತಾಯಿಯನ್ನು ಕರೆದುಕೊಂಡು ಬರಲಾಗಿತ್ತು. ಆದರೆ ಮತ್ತೆ ಮನೆಯಲ್ಲಿ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ ಕಳೆದ ತಿಂಗಳು ಮತ್ತೆ ಬನಶಂಕರಿ ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು. ಆದರೆ ರಾತ್ರಿ ಇಬ್ಬರೂ ಊಟ ಮಾಡಿ ಮಲಗಲು ಹೋಗಿದ್ದರು. ಬೆಳಗ್ಗೆ ವೃದ್ಧ ದಂಪತಿ ನೇಣು ಬಿಗಿದು ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಸದ್ಯ ಟಿವಿ ನೋಡುವ ವಿಚಾರಕ್ಕೆ ಇಬ್ಬರಿಗೂ ಮನಸ್ತಾಪ ಆಗಿತ್ತು ಎಂದು ವೃದ್ಧಾಶ್ರಮದವರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ಮಂಗಳೂರು: ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ನಾಪತ್ತೆ..!

ಮಂಗಳೂರು: ವಿಶ್ವ ಸೈಕಲ್ ದಿನಾಚರಣೆ-2026ರ ಅಂಗವಾಗಿ ‘ಸಂಡೇಸ್ ಆನ್ ಸೈಕಲ್’ ಸೈಕಲ್ ಜಾಥಾ ಆಯೋಜನೆ..!

ಮಂಗಳೂರು: ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ದೀಪಾ ಭಸ್ತಿ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮ..!

error: Content is protected !!