ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು: ಕಾಸರಗೋಡಿನಲ್ಲಿ ಮಹಾಶಿಲಾ ಸಂಸ್ಕೃತಿಯ ಗುಹೆ ಜೊತೆ ಮಹಾಶಿಲಾ ಸಂಸ್ಕೃತಿಗೆ ಸೇರಿದ ನೂತನ ಅವಶೇಷಗಳು ಪತ್ತೆ

ಕಾಸರಗೋಡಿನಲ್ಲಿ ಮಹಾಶಿಲಾ ಸಂಸ್ಕೃತಿಯ ಗುಹೆ ಪತ್ತೆಯಾಗಿದೆ, ಉತ್ಪನನದಲ್ಲಿ ಮಡಿಕೆ ಅವಶೇಷ, ಕಬ್ಬಿಣದ ಉಪಕರಣಗಳು ದೊರಕಿವೆ.

ಕುಟ್ಟಿಕೋಲ್ ಪಂಚಾಯತ್ ಬಂದಡ್ಕ ಮಣಿಮೂಲ ಪ್ರದೇಶದಲ್ಲಿ ಪುರಾತತ್ವ ಇಲಾಖೆ ನಡೆಸಿದ ಇತ್ತೀಚಿನ ಉತ್ಪನನ ಕಾರ್ಯದಲ್ಲಿ ಮಹಾಶಿಲಾ ಸಂಸ್ಕೃತಿಗೆ ಸೇರಿದ ನೂತನ ಅವಶೇಷಗಳು ಪತ್ತೆಯಾಗಿದ್ದು, ಇಲ್ಲಿ ಪುರಾತನ ಮಾನವ ವಾಸದ ಇತಿಹಾಸಕ್ಕೆ ಮತ್ತೊಂದು ದೃಢ ಸುಳಿವು ಸಿಕ್ಕಂತಾಗಿದೆ. ಕಲ್ಪತಾಯಮ ಪ್ರದೇಶದಲ್ಲಿ ನಡೆದ ಅಧ್ಯಯನದ ವೇಳೆ ಮುರಿದ ಮಡಿಕೆ ತುಂಡುಗಳು, ಕಬ್ಬಿಣದ ಉಳಿ, ಮತ್ತು ಕಬ್ಬಿಣದ ರಾಡ್‌ಗಳು ಪತ್ತೆಯಾಗಿವೆ. ಈ ವಸ್ತುಗಳನ್ನು ಪುರಾತತ್ವ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದು, ತಜ್ಞರ ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇದಕ್ಕೂ ಮೊದಲು, ಏಪ್ರಿಲ್ 4ರಂದು ಜಲಜೀವನ ಯೋಜನೆಗಾಗಿ ನಡೆದ ಅಗೆಯುವ ಸಂದರ್ಭದಲ್ಲಿ ಇದೇ ಪ್ರದೇಶದಲ್ಲಿ ಮಹಾಶಿಲಾ ಸಂಸ್ಕೃತಿಯ ಮಡಿಕೆಗಳು ಮತ್ತು ಮೂಳೆ ತುಣುಕುಗಳು ದೊರೆತಿದ್ದವು. ನಂತರ ಮಳೆಯಿಂದಾಗಿ ಉತ್ಪನನ ಕಾರ್ಯ ವಿಳಂಬಗೊಂಡಿದ್ದರೂ, ನವೆಂಬರ್ 15ರಂದು ಮಣ್ಣಿನ ಪದರಗಳನ್ನು ತೆರವುಗೊಳಿಸುವ ಕಾರ್ಯ ಪುನರಾರಂಭಿಸಲಾಯಿತು. ಈ ವೇಳೆ ಕಲ್ಪತಾಯಮ ಬಳಿಯ ಮಣ್ಣಿನ ಕೋಣೆಯಲ್ಲಿ ಆ ಅಮೂಲ್ಯ ಕಲ್ಲುಗಳು, ಕಬ್ಬಿಣದ ಉಪಕರಣಗಳು ಮತ್ತು ಮಡಿಕೆ ಅವಶೇಷಗಳು ಮತ್ತೆ ಪತ್ತೆಯಾದವು.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!