ಜನ ಮನದ ನಾಡಿ ಮಿಡಿತ

Advertisement

ಒಂದೂವರೆ ವರ್ಷದಲ್ಲಿ ನಾಲ್ವರು ಆತ್ಮಹತ್ಯೆ!….ಅಸಲಿಗೆ ಆತ್ಮಹತ್ಯೆಯ ಕಾರಣ ಆದರೂ ಏನು?..

ಸಾನಿಧ್ಯ.. ಐಷಾರಾಮಿ ಬಂಗಲೆ.. ಇದರಲ್ಲಿ ಇದ್ದೋರು ಹಣವಂತರು.. ಅಧಿಕಾರವಂತರು. ಆದ್ರೆ, ಇವರ ಹಣೆಬರಹದಲ್ಲಿ ಸಾವು ಹೀಗೆ ಬರುತ್ತೆ ಅಂತ ಊಹಿಸಿರಲಿಲ್ಲವೇನೋ? ತಮ್ಮ ಕೈಯ್ಯಾರೆ ತಾವೇ ಪ್ರಾಣ ತೆಗೆದುಕೊಂಡಿದ್ದಾರೆ.

ಈ ಸಾನಿಧ್ಯವೀಗ ಸಾವಿನ ಸಾನಿಧ್ಯವಾಗಿ ಕಳಂಕವನ್ನ ಹೊತ್ತಿದೆ. ಇದು ಸಾವಿನ ಮನೆಯ ದುರಂತ ಕಥೆ. ಆ ಮನೆಗೆ ಇರೋ ದೋಷವೋ ಅಥವಾ ದುರ್ಬಲ ಮನಸ್ಥಿತಿಯೋ ಸಾಲು ಸಾಲು ಆತ್ಮಹತ್ಯೆ ನಡೆದುಹೋಗಿದೆ. ಒಂದೇ ಮನೆಯಲ್ಲಿ ಈವರೆಗೂ ನಾಲ್ವರು ಸಾವನ್ನಪ್ಪಿದ್ದಾರೆ. ಅದರಲ್ಲಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆಗಳು ನಡೆದಿರೋ ಮನೆಗೆ ಭಯದ ಕಂಟಕ ಅಂಟಿದೆ. ಸ್ಥಳೀಯರಲ್ಲಿ ಆತಂಕದ ಛಾಯೆ ಆವರಿಸಿದೆ.
ಶಿವಮೊಗ್ಗದ ಅಶ್ವತ್ ನಗರದ ಸಾನಿಧ್ಯ ನಿವಾಸ.. ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಅವರ ಕುಟುಂಬಕ್ಕೆ ಸೇರಿದ ಭವ್ಯಬಂಗಲೆ.. ಆದ್ರೀಗ ಈ ಮನೆಯ ಬಗ್ಗೆಯೇ ಸುತ್ತ ಮುತ್ತಲ ಜನರಲ್ಲಿ ಭಯವನ್ನ ಹುಟ್ಟಿಸಿದೆ.

ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಕುಟುಂಬದ ದುರಂತ ಕಥೆ ಸತ್ಯಕ್ಕೆ ನಿಲುಕದಾಗಿದೆ. ಇಡೀ ಕುಟುಂಬ ನೆಲೆಸಿದ್ದ `ಸಾನಿಧ್ಯ’ ನಿವಾಸ ಸಾವಿನ ನಿವಾಸವಾಗಿಬಿಟ್ಟಿದೆ. ಇದುವರೆಗೂ ಈ ಮನೆಯಲ್ಲಿ ನಾಲ್ಕು ಸಾವಾಗಿದೆ. ಅದರಲ್ಲೂ ನಾಲ್ವರು ಆತ್ಮಹತ್ಯೆಗೆ ಶರಣಾಗಿರೋದು ಆತಂಕ ಮೂಡಿಸಿದೆ. ಮನೆಯಲ್ಲಿ ಮೊದಲು ಮನೆಯ ಯಜಮಾನ ಡಾ. ನಾಗರಾಜ್ ಹೊಮ್ಮರಡಿ ಆತ್ಮಹತ್ಯೆಗೆ ಶರಣಾಗಿದ್ರಂತೆ. ಇದಾದ ಬಳಿಕ ಕಳೆದ ಒಂದೂವರೆ ವರ್ಷಗಳ ಹಿಂದಷ್ಟೇ ಅವರ ಪುತ್ರ ಆಕಾಶ್ ಪತ್ನಿ ನವಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಮಾಸುವ ಮುನ್ನವೇ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ ಮತ್ತು ಅವರ ಪುತ್ರ ಆಕಾಶ್ ಹೊಮ್ಮರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಹಿಂದೆ ಈ ಮನೆಯ ಮೂಲ ಮಾಲೀಕರು ಎನ್ನಲಾದ ರಾಜಶೇಖರ್ ಎನ್ನುವವರು ಕೂಡ ಮನೆ ಕಟ್ಟಿದ ಕೆಲವೇ ದಿನಗಳಲ್ಲಿ ಆನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!