ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಸ್ಕೂಟಿಗೆ ಹಿಂಬದಿಯಿಂದ ಬಸ್ ಡಿ*ಕ್ಕಿ- ಬಾಲಕಿ ಸಾ*ವು….!

ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್ಸೊಂದು ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ತಂದೆಯೊಂದಿಗೆ ಸಹ ಸವಾರೆಯಾಗಿ ಬಂದಿದ್ದ ಬಾಲಕಿ ಸಾತ್ವಿ ಶೆಟ್ಟಿ ತೀವ್ರ ಗಾಯಗಳೊಂದಿಗೆ ಸಾವನ್ನಪ್ಪಿದ್ದಾಳೆ.

ಮೃತ ಸಾತ್ವಿ ತನ್ನ ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾಳೆ. ದುಬಾಯಿಯಲ್ಲಿ ವಾಸವಿದ್ದ ಈ ಕುಟುಂಬವು ಮುಂದೆ ಊರಿನಲ್ಲಿಯೇ ನೆಲೆಸುವ ಸಿದ್ಧತೆಯಲ್ಲಿತ್ತು. ಸಾತ್ವಿಗಾಗಿ ಆಕೆಯ ಹೆತ್ತವರು ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶಾತಿಯನ್ನೂ ಮುಗಿಸಿದ್ದರು. ಆಕೆಯ ತಂದೆ ನಿತ್ಯಾನಂದ ಶೆಟ್ಟಿ ಅವರು ಮಾತ್ರ ದುಬಾಯಿಗೆ ತೆರಳುವವರಿದ್ದು, ಕಾಪು ಪೇಟೆಗೆ ಏನನ್ನೋ ತರಲು ಹೋಗಿ ವಾಪಾಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ತಾಣಕ್ಕೂ ಅವರ ಪೂವಣಿಗುತ್ತು ಮನೆಗೂ ಕೇವಲ ಅರ್ಧ ಕಿ.ಮೀ. ದೂರವಷ್ಟೇ ಬಾಕಿ ಇತ್ತು. ಸ್ಕೂಟಿ ಸವಾರ ನಿತ್ಯಾನಂದ ಶೆಟ್ಟಿ ಅವರಿಗೂ ಗಾಯಗಳಾಗಿವೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!