ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ರಸ್ತೆಯಲ್ಲಿ ರಾಶಿ ಹಾಕಲಾಗಿದ್ದ ಕಾಂಕ್ರೀಟ್ ತುಂಡುಗಳಿಂದ ರಸ್ತೆ ಅಪಘಾತ…!

ಕಾಮಗಾರಿಯ ವೇಳೆ ರಸ್ತೆಯಲ್ಲಿ ರಾಶಿ ಹಾಕಲಾಗಿದ್ದ ಕಾಂಕ್ರೀಟ್ ತುಂಡುಗಳನ್ನು ತೆರವು ಗೊಳಿಸದೆ ಇರುವುದೇ ಕಾರು ಅಪಘಾತಕ್ಕೆ ಕಾರಣವಾಗಿ ಜೀವಹೋಗಿದೆ ಎಂದು ಆರೋಪ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಅಡಿಸನಲ್ ಎಸ್.ಪಿ.ಅನಿಲ್ ಎಸ್.ಭೂಮರೆಡ್ಡಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಗಡಿಯಾರದಲ್ಲಿ ಕಾರೊಂದು ರಸ್ತೆ ಡಿವೈಡರ್ ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದ. ಘಟನೆ ನಡೆದ ಬಳಿಕ ಅಪಘಾತದಲ್ಲಿ ಚಾಲಕ ಸಾವನ್ನಪ್ಪಲು ರಸ್ತೆಯಲ್ಲಿ ಹಾಕಲಾದ ಸಿಮೆಂಟ್ ಬ್ಲಾಕ್‌ಗಳು ಕಾರಣವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಗಳು ವ್ಯಕ್ತವಾಗಿದ್ದವು.

ಅದಾಗಿ ಎರಡನೇ ದಿನಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ರಸ್ತೆ ದಾಟಿ ಹೋಗುತ್ತಿದ್ದ ಪಾದಾಚಾರಿ ಸೈಯದ್ ರಿಯಾಜ್ ಎಂಬವರಿಗೆ ಕಾರೊಂದು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಕೂಡ ನಡೆದಿದೆ. ಎರಡು ಘಟನಾ ಸ್ಥಳಗಳಿಗೆ ಅಡಿಸನಲ್ ಎಸ್. ಪಿ.ಅನಿಲ್ ಎಸ್.ಭೂಮರೆಡ್ಡಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ಟ್ರಾಫಿಕ್ ಎಸ್.ಐ.ಆದರ್ಶ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!