ಜನ ಮನದ ನಾಡಿ ಮಿಡಿತ

Advertisement

ಮಧೂರು: ತೆಂಕಣ ಯಕ್ಷಗಾನಕ್ಕೆ ಅನನ್ಯ ಕೊಡುಗೆ ಇತ್ತ ಮಧೂರು ವೆಂಕಟ ಕೃಷ್ಣ ಇನ್ನಿಲ್ಲ..!

ಗಡಿನಾಡು ಕಾಸರಗೋಡಿನ ಹಿರಿಯ ಪ್ರಸಂಗಕರ್ತ ಯಕ್ಷಗಾನ ಅರ್ಥಧಾರಿ, ನಿವೃತ್ತ ಸೇಲ್ ಟೇಕ್ಸ್ ಅಧಿಕಾರಿ ಮಧೂರು ವೆಂಕಟಕೃಷ್ಣ ನಿಧನರಾಗಿದ್ದಾರೆ.

ವಯೋ ಸಹಜ ಅಸೌಖ್ಯ ನಿಮಿತ್ತ ಸೋಮವಾರ ಸಂಜೆ ಮಧೂರಿನ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಸುಮಿತ್ರಾ ಹಾಗೂ ಇಬ್ಬರು ಪುತ್ರರು ಸಹಿತ ಓರ್ವ ಮಗಳು ಹಾಗೂ ಅಪಾರ ಆಪ್ತ ವಲಯವನ್ನು ಅಗಲಿದ್ದಾರೆ. ಕಾಸರಗೋಡಿನ ಮಾರಾಟ ತೆರಿಗೆ ಇಲಾಖೆ ಅಧಿಕಾರಿಯಾಗಿ ನಿವೃತ್ತರಾದ ಅವರು ಉಳಿಯ ಧನ್ವಂತರಿ ಯಕ್ಷಗಾನ ಸಂಘದ ನೆರಳಲ್ಲಿ ಅರ್ಥಧಾರಿ, ವೇಷಧಾರಿ, ಕಲಾವಿದನಾಗಿ ಮೆರೆದವರು. ತೆಂಕಣ ಯಕ್ಷಗಾನದ ದಂತಕಥೆ ಕೂಡ್ಲು ನಾರಾಯಣ ಬಲ್ಯಾಯರ ಶಿಷ್ಯನಾಗಿ ಯಕ್ಷಗಾನ ಶಿಕ್ಷಣ ಪಡೆದ ಅವರು ಪ್ರಸಂಗಕರ್ತನಾಗಿ ಮೆರೆದವರು. ಅವರ ಸಾಧನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರಿಗೆ ರಾಜ್ಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇನ್ನು ಮಧೂರು ಕ್ಷೇತ್ರಮಹಾತ್ಮೆ ಸಹಿತ ವೈಶಾಲಿನಿ ಪರಿಣಯ, ಧನ್ವಂತರಿ ಮಹಾತ್ಮೆ, ಕ್ಷೇತ್ರ ಮಹಾತ್ಮೆ, ನದಿಯಾಗಿ ಹರಿದ ನಂದಿನಿ, ದುಂಬಿಯಾಗಿ ನೆಗೆದ ಭ್ರಾಮರಿ ಹೀಗೆ ಅನೇಕ ಪ್ರಸಂಗಗಳನ್ನು ರಚಿಸಿದ ಇವರ ಕೃತಿಗಳು ಮೇಳದ ಆಟ, ತಾಳಮದ್ದಳೆ ಕೂಟಗಳಲ್ಲಿ ಜನಪ್ರಿಯವಾಗಿವೆ. ಇವರ ಕಾವ್ಯ ರಚನೆಗಳು ವಿವಿಧ ಭಾಗವತರ ಕಂಠದಲ್ಲಿ ಹಾಡಲ್ಪಟ್ಟು ಜಾಲತಾಣದ ಮೂಲಕ ಸಹಸ್ರಾರು ಕೇಳುಗರನ್ನು ತಲುಪಿದೆ. ಯಕ್ಷಗಾನದಲ್ಲಿ ಮೊದಲು ವಂದಿಸುವ ಮಧೂರು ಕ್ಷೇತ್ರದ ಮುಂಬಾಗಿಲಿನ ಬಳಿ ವಾಸಿಸುವ ಅವರು ಬರೆದ “ಮಧೂರು ಕ್ಷೇತ್ರ ಮಹಾತ್ಮೆ” ಇತ್ತೀಚಿನ ಮಧೂರು ಬ್ರಹ್ಮಕಲಶದ ವೇಳೆ ಪ್ರದರ್ಶನ ಕಂಡಿತ್ತು. ಆ ವೇದಿಕೆಯಲ್ಲಿ ಅವರನ್ನು ಸನ್ಮಾನಿಸಲಿಗಿತ್ತು. ತೆಂಕಣ ಯಕ್ಷಗಾನದ ಅನೂಭವಿಯಾಗಿದ್ದ ಅವರು ಅರ್ಥಗಾರಿಕೆ ಮೂಲಕ ಗತ ಕಾಲದ ಪ್ರಸಿದ್ಧರ ಹಾಡುಗಾರಿಕೆ ಆಲಿಸಿ, ಅರ್ಥವಿಸಿ ಬೆಳೆದವರು. ಅವರ ಪ್ರಸಂಗಗಳು ತೆಂಕಿನ ಎಲ್ಲಾ ಮೇಳಗಳಲ್ಲೂ ಜನಪ್ರಿಯವಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!