ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ನಗರದ ಹಸಿರು ಹೊದಿಕೆ ಇದೀಗ ಗಂಭೀರ ಸಂಕಷ್ಟವನ್ನು ಎದುರಿಸುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ 19,268ಕ್ಕೂ ಹೆಚ್ಚು ಮರಗಳ ಮಾರಣಹೋಮವಾಗಿದ್ದು, ನಗರದ ಪರಿಸರ ಸಮತೋಲನದ ಬಗ್ಗೆ ಆತಂಕ ಹೆಚ್ಚಾಗಿದೆ. ಹೊಸ ಮೆಟ್ರೋ ಮಾರ್ಗ, ರಸ್ತೆ ವಿಸ್ತರಣೆ, ಮೇಲ್ವೇತುವೆ, ಸಾರ್ವಜನಿಕ ಮೂಲಸೌಕರ್ಯ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಸಾವಿರಾರು ಮರಗಳು ಬಲಿಯಾಗಿವೆ. ಪರಿಸರ ತಜ್ಞರು ಹಾಗೂ ನಾಗರಿಕರು ನಗರದಲ್ಲಿ ಹಸಿರು ಹೊದಿಕೆ ವೇಗವಾಗಿ ಕುಗ್ಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 19,268 ಮರಗಳ ಮಾರಣಹೋಮ 2023-24ರಿಂದ 2026ರ ಜೂನ್‌ವರೆಗೆ ನಗರದಲ್ಲಿ ಒಟ್ಟು 19,268 ಮರಗಳನ್ನು ಕಡಿಯಲಾಗಿದೆ. ಇದರಲ್ಲೂ 7,683 ಮರಗಳು ವಿವಿಧ ಸಾರ್ವಜನಿಕ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಕಡಿಯಲಾಗಿದೆ ಎಂದು ವರದಿಯಾಗಿದೆ.



