ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಹಳೆಯ ಪಾಣೆಮಂಗಳೂರು ಸೇತುವೆಯ ಸುರಕ್ಷತೆ ಮತ್ತೆ ಪ್ರಶ್ನೆ…!

ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಒಳಪಟ್ಟು, ಪುರಸಭೆಯ ಸುಪರ್ದಿಯಲ್ಲಿರುವ ಬ್ರಿಟಿಷ್ ಕಾಲದ ಹಳೆಯ ಪಾಣೆಮಂಗಳೂರು ಸೇತುವೆಯ ಸುರಕ್ಷತೆ ಕುರಿತು ಮತ್ತೆ ಆತಂಕ ವ್ಯಕ್ತವಾಗಿದೆ.

ಸೇತುವೆಯ ಬಳಕೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಘನ ಗಾತ್ರದ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸೇತುವೆಯ ಎರಡೂ ಬದಿಗಳಲ್ಲಿ ಘನ ವಾಹನಗಳು ಪ್ರವೇಶಿಸದಂತೆ ಕಬ್ಬಿಣದ ತಡೆಗಳನ್ನು ಅಳವಡಿಸಲಾಗಿತ್ತು.

ಆದರೆ, ಹಲವು ಬಾರಿ ವಾಹನಗಳು ತಡೆಗೆ ಡಿಕ್ಕಿ ಹೊಡೆದು ಅವುಗಳನ್ನು ಉರುಳಿಸಿದ ಘಟನೆಗಳು ನಡೆದಿವೆ. ಬಳಿಕ ಮತ್ತಷ್ಟು ಬಲಿಷ್ಠವಾದ ಕಬ್ಬಿಣದ ತಡೆಗಳನ್ನು ಅಳವಡಿಸಲಾಗಿದ್ದರೂ, ಅವುಗಳಿಗೂ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ತಡೆಗಳ ಸ್ವರೂಪ ಬದಲಾಗಿತ್ತು.

ಇದೀಗ ಗುರುವಾರ ಬೆಳಗ್ಗೆಯಿಂದ ಪಾಣೆಮಂಗಳೂರು ಗೂಡಿನ ಬಳಿಯ ಭಾಗದಲ್ಲಿದ್ದ ಕಬ್ಬಿಣದ ತಡೆ ಕೆಳಗೆ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ತಡೆ ಸ್ವತಃ ಉರುಳಿ ಬಿದ್ದಿದೆಯೇ ಅಥವಾ ಯಾವುದಾದರೂ ಘನ ವಾಹನ ಡಿಕ್ಕಿ ಹೊಡೆದು ಕೆಳಗೆ ಹಾಕಿ, ಬಳಿಕ ಬದಿಗೆ ಸರಿಸಿ ತೆರಳಿದೆಯೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಸೇತುವೆಯ ಸುರಕ್ಷತೆಗಾಗಿ ಅಳವಡಿಸಿರುವ ತಡೆಗಳು ಪದೇಪದೇ ಹಾನಿಗೊಳಗಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಬಂಟ್ವಾಳ ಪುರಸಭೆ ಸೂಕ್ತ ಪರಿಶೀಲನೆ ನಡೆಸಿ, ತಡೆ ಹಾನಿಗೊಳಿಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!