ಬ್ಲಿಂಕ್ಇಟ್ ಆ್ಯಪ್ ಮೂಲಕ ಖರೀದಿಸಿದ ಮೊಟ್ಟೆಯಲ್ಲಿ ಹುಳ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರಿನ ಬ್ಲಿಂಕ್ಇಟ್ ಮಳಿಗೆಯನ್ನು ಸೀಲ್ ಮಾಡಲಾಗಿದೆ.

ಗ್ರಾಹಕರೊಬ್ಬರು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಫಳ್ನೀರ್ನ ಫಳ್ನೀರ್ ಕಟ್ಟಡದಲ್ಲಿ ಬ್ಲಿಂಕ್ಇಟ್ ಆನ್ಲೈನ್ ಮಾರಾಟ ಸಂಸ್ಥೆ ಕಾರ್ಯಾಚರಿಸುತ್ತಿದೆ.

ಅಧಿಕಾರಿಗಳು ದಾಳಿ ನಡೆಸಿದ ವೇಳೆ ಒಡೆದ ಮೊಟ್ಟೆಗಳಿದ್ದ ಪ್ಯಾಕೆಟ್ಗಳು ಪತ್ತೆಯಾಗಿವೆ. ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದೇ ವೇಳೆ, ಬ್ಲಿಂಕ್ಇಟ್ ಆನ್ಲೈನ್ ಮಾರಾಟ ಸಂಸ್ಥೆಯವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆಹಾರ ಗುಣಮಟ್ಟ ಹಾಗೂ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.



