ಬಿ.ಸಿ.ರೋಡಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಸದಸ್ಯರಿಗೆ ಶೇ.14ರಷ್ಟು ಲಾಭಾಂಶ ಘೋಷಿಸಿದೆ.

ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.15ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮೋಹನ್ ಪಿ.ಎಸ್. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸಂಘವು ₹50 ಲಕ್ಷಕ್ಕೂ ಅಧಿಕ ಲಾಭ ಗಳಿಸಿದೆ. ಸಂಘವು ಅಭಿವೃದ್ಧಿ ಹಾಗೂ ಸ್ಥಿರತೆಯಲ್ಲಿ ಮುನ್ನಡೆಯುತ್ತಿದ್ದು, ಮುಂದಿನ ವರ್ಷ 25ನೇ ವರ್ಷದ ಸಂಭ್ರಮ ಆಚರಿಸಲಿದೆ ಎಂದು ಮೋಹನ್ ಪಿ.ಎಸ್. ಸಭೆಗೆ ಮಾಹಿತಿ ನೀಡಿದರು.
ವರದಿ ವರ್ಷದಲ್ಲಿ ಸಂಘವು ₹38 ಕೋಟಿಗೂ ಅಧಿಕ ಮೊತ್ತದ ಸಾಲ ವಿತರಿಸಿದ್ದು, ಸಾಲ ವಸೂಲಾತಿಯಲ್ಲಿ ಶೇ.97ರಷ್ಟು ಸಾಧನೆ ದಾಖಲಿಸಿದೆ ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುಣಶೇಖರ ಕೆ. ಅವರು ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕಾಂಚಲಾಕ್ಷಿ ಮಣಿನಾಲ್ಕೂರು, ನಿರ್ದೇಶಕರಾದ ಈಶ್ವರ ಭಟ್ ಬೋಳಂತೂರು, ವಸಂತ ಬಡಗಕಜೆಕಾರು, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಓಲ್ವಿನ್ ಮೋನಿಸ್, ರಾಜೇಂದ್ರ ಹಾರ್ದೊಟ್ಟು, ಅರವಿಂದ ಭಟ್ ಮಡವು, ಜೋನ್ ಸೇರಾ ಹಾಗೂ ಜಯಶ್ರೀ ಉಪ್ಪಿನಂಗಡಿ ಉಪಸ್ಥಿತರಿದ್ದರು.
ಸಂಘದ ಬೆಳವಣಿಗೆಗೆ ಸಂಬಂಧಿಸಿದಂತೆ ಸದಸ್ಯರು ಸಭೆಯಲ್ಲಿ ವಿವಿಧ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.



