ಜನ ಮನದ ನಾಡಿ ಮಿಡಿತ

Advertisement

ಏಳು ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚರಸ್ ಹಾಗೂ ಕಾರು ಜಪ್ತಿ; ಓರ್ವ ಬಂಧನ

ಮಂಗಳೂರು: ಏಳು ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚರಸ್ ಹಾಗೂ ಕಾರನ್ನು ಜಪ್ತಿ ಮಾಡಿ ಓರ್ವನನ್ನು ಬಜ್ಪೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಅಬ್ದುಲ್‌ ಅಝೀಜ್‌ (34) ಬಂಧಿತ ಆರೋಪಿಯಾಗಿದ್ದು, ಅತನಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಚರಸ್‌ ಮತ್ತು ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಂಗಳೂರು ನಗರದಾದ್ಯಂತ ಮಾದಕ ವ್ಯಸನ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಮೇಲಾಧಿ ಕಾರಿಗಳು ನೀಡಿದ ಸೂಚನೆಯಂತೆ ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್‌ ಫ್ಲೆಟ್‌ ಇಲ್ಲದ ಸ್ವಿಫ್ಟ್‌ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ತಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಸೂರಿಂಜೆ ಕಿನ್ನಿಗುಡ್ಡೆ ಹೌಸ್‌ ನಿವಾಸಿ ಅಬ್ದುಲ್‌ ಅಝೀಜ್‌ನನ್ನು ವಶಕ್ಕೆ ಪಡೆದು ಕಾರು ಪರಿಶೀಲನೆ ಮಾಡಿದಾಗ 250 ಗ್ರಾಂ ತೂಕದ ಮಾದಕ ವಸ್ತು ಚರಸ್‌ ಪತ್ತೆಯಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಇನ್ನು ಪರಾರಿಯಾದ ಆರೊಪಿಯ ಪತ್ತೆಗಾಗಿ ಪೊಲೀಸರು ತೀವ್ರ ಕಾರ್ಯಚರಣೆ ನಡೆಸುತ್ತಿದ್ದಾರೆ. ಬಜಪೆ ಠಾಣಾ ಪಿ.ಐ. ಪ್ರಕಾಶ್‌ ನೇತೃತ್ವದ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿತ್ತು.

Leave a Reply

Your email address will not be published. Required fields are marked *

ಬೆಂಗಳೂರು: ಜ್ಯೋತಿಷ್ಯದ ನೆಪದಲ್ಲಿ ₹40 ಲಕ್ಷ ವಂಚನೆ: ಎಐ ವಿಡಿಯೋ ಮೂಲಕ ಅಪಘಾತದ ನಾಟಕ!

ಉಡುಪಿ: ನಿಟ್ಟೆ ಹಲಸು ಸಂಸ್ಕರಣಾ ಘಟಕ ನಾಮಕಾವಸ್ಥೆ: ಅನುದಾನದ ಬಳಕೆ ಬಗ್ಗೆ ಅನುಮಾನ…!

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ನೇಮಕ?

ರಾಂಚಿ: ಮೈದಾನದಲ್ಲಿ ಅನುಚಿತ ವರ್ತನೆ: ವೆಸ್ಟ್ ಇಂಡೀಸ್‌ನ ಪೊವೆಲ್, ರದರ್‌ಫೋರ್ಡ್‌ಗೆ ಐಸಿಸಿ ಎಚ್ಚರಿಕೆ

ರಾಜ್‌ಕೋಟ್: ರಣಜಿ ಟ್ರೋಫಿಯಲ್ಲಿ ರವೀಂದ್ರ ಜಡೇಜಾ ಶತಕದ ಅಬ್ಬರ; ನ್ಯೂಜಿಲೆಂಡ್ ಸರಣಿಗೆ ಭರ್ಜರಿ ತಾಲೀಮು

ಬಂಟ್ವಾಳ: ಯು.ಟಿ. ಖಾದರ್ ಜನ್ಮದಿನ: ಬಂಟ್ವಾಳ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ವಾಷಿಂಗ್ಟನ್: ರಷ್ಯಾ–ಉಕ್ರೇನ್ ಇಂಧನ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್ ಘೋಷಣೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ 24 ಗಂಟೆಯೊಳಗೆ ದಿನಾಂಕ ನಿಗದಿಪಡಿಸಿ: ಸಿಜೆಪಿ ಆಗ್ರಹ

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಎದುರು ವಿದ್ಯಾರ್ಥಿಗಳ ಪ್ರತಿಭಟನೆ

error: Content is protected !!