ಜನ ಮನದ ನಾಡಿ ಮಿಡಿತ

Advertisement

ಜರ್ಮನಿ: ಜರ್ಮನಿಯಲ್ಲಿ ಕಟ್ಟಡಕ್ಕೆ ಬೆಂಕಿ: ಮೂವರು ಭಾರತೀಯರು ಸಾವು, ಐವರಿಗೆ ಗಾಯ

ಜರ್ಮನಿಯ ಬೋಚಮ್‌ನ ಹಾಫ್‌ಸ್ಟೆಡೆ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ರೊಮೇನಿಯಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಮುಂಜಾನೆ ಸುಮಾರು 4.15ಕ್ಕೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೃತರಲ್ಲಿ 25 ಮತ್ತು 27 ವರ್ಷದ ಇಬ್ಬರು ಮಹಿಳೆಯರು ಹಾಗೂ 26 ವರ್ಷದ ಪುರುಷ ಸೇರಿದ್ದಾರೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯನ್ನು ಉದ್ದೇಶಪೂರ್ವಕವಾಗಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ತಳ್ಳಿಹಾಕಿದ್ದಾರೆ. ಬಂಧಿತ ವ್ಯಕ್ತಿಯ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೃತರ ಗುರುತು ಹಾಗೂ ಅವರು ಭಾರತದ ಯಾವ ರಾಜ್ಯಕ್ಕೆ ಸೇರಿದವರು ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಘಟನೆಯ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

ಮಂಗಳೂರು : ಕಳ್ಳತನ ಪ್ರಕರಣ ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ…!

ಉಡುಪಿ: ಅ.17ರಿಂದ ಬ್ರಹ್ಮಾವರದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ–2026

ಪುತ್ತೂರು: ಸಂಟ್ಯಾರ್ ಬಳಿ ಭೀಕರ ಅಪಘಾತ: ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಮಗುಚಿಬಿದ್ದ ಲಾರಿ

ಬಂಟ್ವಾಳ: 2 ವರ್ಷ 9 ತಿಂಗಳ ಪುಟಾಣಿ ಪ್ರದ್ಯಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಉಡುಪಿ: ಉಚ್ಚಿಲ ದಸರಾ ಸಂಭ್ರಮಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಆಗಮನ: ಮೀನುಗಾರರ ಸಮಸ್ಯೆ ಪ್ರಸ್ತಾಪಕ್ಕೆ ಸಿದ್ಧತೆ

ಪುತ್ತೂರು: ನವೆಂಬರ್ 8ರಂದು ಅಶೋಕ ಜನಮನ: 70 ಸಾವಿರ ಮಂದಿಗೆ ದೋಸೆ ವ್ಯವಸ್ಥೆ

ಉಡುಪಿ: 432 ದಿನಗಳ ಹೋರಾಟಕ್ಕೆ ಜಯದ ಭರವಸೆ: ಬೈಂದೂರು ರೈತರ ಬೇಡಿಕೆಗೆ ಸರ್ಕಾರ ಸ್ಪಂದನೆ

ಮಂಗಳೂರು: ಮಂಗಳೂರು ದಸರಾ- ಇಂದು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಬದಲಾವಣೆ

ಬಂಟ್ವಾಳ: ಪುಟಾಣಿಗಳಿಂದ ‘ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ…!

error: Content is protected !!