ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಹಿಂ. ಜಾ. ವೇ ವತಿಯಿಂದ ಬಿಸಿರೋಡಿನಲ್ಲಿ ಬೃಹತ್ ಪಂಜಿನ ಮೆರವಣಿಗೆ

ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಘಟಕ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ದ ಅಂಗವಾಗಿ ಬಿಸಿರೋಡಿನಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.


ಕೈಕಂಬ ಪೊಳಲಿ ದ್ವಾರದಿಂದ ಆರಂಭವಾದ ಪಂಜಿನ ಮೆರವಣಿಗೆಗೆ ಬಂಟ್ವಾಳ ಶಾಸಕರಾಜೇಶ್ ನಾಯ್ಕ್ ಅವರು ಚಾಲನೆ ನೀಡಿದರು.


ಅಲ್ಲಿಂದ ಹೊರಟ ಮೆರವಣಿಗೆ ರಾಜ ಮಾರ್ಗವಾಗಿ ಸ್ಪರ್ಶಾ ಕಲಾಮಂದಿರದವರೆಗೆ ನಡೆಯಿತು.
ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಪರ್ತಕರ್ತೆ ಶ್ರೀಲಕ್ಮೀ, ಹಿಂದೂ ಸಮಾಜ ಜಾಗೃತರಾಗಬೇಕಿದೆ, ಅಂದರೆ ಅಂತರಿಕವಾದ ವೈಮನಸ್ಸುಗಳನ್ನು ದೂರಮಾಡಿಕೊಂಡು ಸಶಕ್ತ ಭಾರತ ನಿರ್ಮಾಣದ ಗುರಿ ನಮ್ಮದಾಗಿರಬೇಕಾಗಿದೆ ಎಂದರು.


ಅಖ0ಡ ಭಾರತ ನಿರ್ಮಾಣದ ಕನಸು ಅಥವಾ ಸಂಕಲ್ಪ ಮಾತಿನಿಂದ ,ಭಾವನೆಯಿಂದ ಸಾಧ್ಯವಿಲ್ಲ. ಅಥವಾ ಕೇವಲ ಸಂಕಲ್ಪವಾಗಿ ಉಳಿಸುವ ನಿಟ್ಟಿನಲ್ಲಿ ಹೋರಾಟ ಸಲ್ಲದು ಬದಲಾಗಿ ಅಖಂಡ ಭಾರತ ಕಾರ್ಯರೂಪಕ್ಕೆ ತರಲು ಹಿಂದೂ ಸಮಾಜದ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನಡೆಯಬೇಕಿದೆ ಎಂದು ಅವರು ಯುವಕರಿಗೆ ಮನದಟ್ಟು ಮಾಡಿದರು.


ನಾವು ಎಲ್ಲೊ ಒಂದು ಕಡೆ ನಮ್ಮೋಳಗಿನ ಗುರುವನ್ನು ಮರೆತಿದ್ದೇವೆ, ಲೌಕಿಕ ಜಗತ್ತಿನ ಗುರುವನ್ನು ಮರೆತಿದ್ದೇವೆ, ಒಳಗಿನ ಗುರುವನ್ನು ಸಾಕ್ಷ್ಯಾತ್ಕಾರಗೊಳಿಸಿದಾಗ ಭಾರತ ವಿಶ್ವಗುರುವಾಗಲು ಸಾಧ್ಯವಾಗುತ್ತದೆ, ಸುಮ್ಮನೆ ಬಡಕೊಂಡರೆ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕೇಸರಿ ಎಂಬ ಪರಿಕಲ್ಪನೆಗೆ ವಿಶೇಷವಾದ ಮತ್ತು ಮಹತ್ತರವಾದ ಸ್ಥಾನವಿದೆ.ಕೇಸರಿ ಎಂದರೆ ಅಗ್ನಿವೀರರು ಅಂತಹ ಅಗ್ನಿವೀರರ ನಾಡಿನಲ್ಲಿ ಸುಸಂಸ್ಕ್ರತ ವೈಭವದ ಭಾರತವನ್ನು ಕಟ್ಟುವ ಕೆಲಸ ನಮ್ಮಿಂದಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ಸುದರ್ಶನ ಬಜ, ರಾಮ್ ದಾಸ ಬಂಟ್ವಾಳ, ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಸಂಯೋಜಕ ನರಸಿಂಹ ಮಾಣಿ,ತಾಲೂಕು ಸಂಯೋಜಕ ಹರೀಶ್ ಅಜೆಕಲ, ಹಿಂದೂ ಮುಖಂಡ ರವಿರಾಜ್ ಬಿಸಿರೋಡು, ವಕೀಲರಾದ ದಯಾನಂದ ರೈ, ಹಿಂಜಾವೇ ಪ್ರಾಂತ ಸದಸ್ಯರಾದ ಜಗದೀಶ್ ನೆತ್ತರಕೆರೆ, ಮಂಗಳೂರು ಗ್ರಾಮಾಂತರ ಮತ್ತು ಮಹಾನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪಗುಡ್ಡೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಬಾಲಕೃಷ್ಣ ಕಲಾಯಿ, ಯೋಗೀಶ್ ಕಡೆಗೊಳಿ, ರವಿ ಕೆಂಪುಗುಡ್ಡೆ, ತಿರುಲೆಸ್ ಬೆಳ್ಳೂರು, sಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ಮಂಗಳೂರು: ರಾಜಾಜಿ ಉದ್ಯಾನವನದಲ್ಲಿ ಗಾಂಧಿ ಜಯಂತಿ ಆಚರಣೆ

ಸುಳ್ಯ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸುಳ್ಯ ಪೊಲೀಸರ ವಶಕ್ಕೆ…!

ಕಾಸರಗೋಡು: ಮುಗುರೋಡ್‌ನಲ್ಲಿ ಕಾರು-ಬೈಕ್ ಅಪಘಾತ: ಬೈಕ್ ಸವಾರ ಸಾವು, ಪತ್ನಿಗೆ ಗಂಭೀರ ಗಾಯ..!

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ: ಇಬ್ಬರು ಆರೋಪಿಗಳ ಬಂಧನ…!

error: Content is protected !!