ಜನ ಮನದ ನಾಡಿ ಮಿಡಿತ

Advertisement

2025ಕ್ಕೆ ಮಾನವ ಸಹಿತ ಗಗನಯಾನ ಸಾಧ್ಯವಾಗಲಿದೆ; ಇಸ್ರೋ ಮುಖ್ಯಸ್ಥ

2025ಕ್ಕೆ ಮಾನವ ಸಹಿತ ಗಗನಯಾನ ಸಾಧ್ಯವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ತಿಳಿಸಿದ್ದಾರೆ.

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಮಾತನಾಡಿರುವ ಅವರು, ಚಂದ್ರನ ಅಂಗಳದಲ್ಲಿ ಇಳಿದಿರುವ ರೋವರ್ ಪ್ರಜ್ಞಾನ್​ನಲ್ಲಿ ರಸಾಯನಿಕ ಸಂಯೋಜನೆ ಅಧ್ಯಯನಕ್ಕೆ ಸಂಬಂಧಿಸಿದ ಎರಡು ಉಪಕರಣಗಳಿವೆ. ಚಂದ್ರನ ಮೇಲ್ಮೈ ಮೇಲೆ ರಸಾಯನಿಕ ಸಂಯೋಜನೆ ಬಗ್ಗೆ ಅಧ್ಯಯನ ಮಾಡಲಿದೆ. ಚಂದ್ರನ ಮೇಲ್ಮೈ ಮೇಲೆ ರೋವರ್ ಸಂಚಾರ ನಡೆಯಲಿದೆ. ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಮಿಷನ್ ಸೆಪ್ಟೆಂಬರ್​ನಲ್ಲಿ ಉಡಾವಣೆ ಆಗಲಿದೆ. ಗಗನಯಾನದ ಕೆಲಸ ಇನ್ನೂ ನಡೆಯುತ್ತಿದೆ. ಮಾನವ ಸಹಿತ ಗಗನಯಾನ 2025 ಕ್ಕೆ ಸಾಧ್ಯವಾಗಲಿದೆ ಎಂದರು.

ಇನ್ನು ಚಂದ್ರಯಾನ-3 ಬಗ್ಗೆ ಮಾತನಾಡಿ, ನಾವು ಚಂದ್ರನ ದಕ್ಷಿಣ ದ್ರುವದ ಹತ್ತಿರಕ್ಕೆ ಹೋಗಿದ್ದೇವೆ. ದಕ್ಷಿಣ ಧ್ರುವ ಬಹುತೇಕ 70 ಡಿಗ್ರಿಯಲ್ಲಿದೆ. ದಕ್ಷಿಣ ಧ್ರುವದಲ್ಲಿ ಕೆಲವೊಂದು ಅನುಕೂಲಗಳಿವೆ. ಸೂರ್ಯನ ಬೆಳಕು ಕಡಿಮೆ ಬೀಳುತ್ತದೆ. ದಕ್ಷಿಣ ಧ್ರುವದಲ್ಲಿ ಹೆಚ್ಚಿನ ವೈಜ್ಞಾನಿಕ ಅಧ್ಯಯನದ ಅಂಶಗಳಿವೆ. ಚಂದ್ರನ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿಗಳು ದಕ್ಷಿಣ ಧ್ರುವದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!