ಬೆಂಗಳೂರಲ್ಲಿ ಇಂಟರ್ ನ್ಯಾಷನಲ್ ಮೋಸ್ಟ್ ವಾಟೆಂಡ್ ಕ್ರಿಮಿನಲ್ಸ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತಿಬ್ಬರನ್ನು ಬಂಧಿಸಲಾಗಿದೆ.
ಈ ಮೂಲಕ ಶ್ರೀಲಂಕಾ ಸುಪಾರಿ ಕಿಲ್ಲರ್ಸ್ ಅರೆಸ್ಟ್ ಕೇಸ್ನಲ್ಲಿ ಸೆರೆಯಾದವರ ಸಂಖ್ಯೆ ಒಟ್ಟು 6ಕ್ಕೆ ಏರಿಕೆಯಾಗಿದೆ. ತೀವ್ರ ವಿಚಾರಣೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ಕೆಲವು ಸ್ಫೋಟಕ ವಿಚಾರಗಳು ಲಭ್ಯವಾಗಿದೆ.
ಇಂದು ಮನ್ಸೂರ್ ಹಾಗೂ ಅನ್ಬು ಎಂಬ ಕ್ರಿಮಿನಲ್ಸ್ ಬಲೆಗೆ ಬಿದ್ದಿದ್ದಾರೆ. ಇವರಿಬ್ಬರು ಬಂಧಿತ ಲಂಕಾ ಕ್ರಿಮಿನಲ್ಸ್ಗೆ ಪಾಸ್‌ಪೋರ್ಟ್ ಮಾಡಿಸಲು ಮುಂದಾಗಿದ್ದರು. ಭಾರತದಿಂದ ಪಾಸ್‌ಪೋರ್ಟ್ ಮಾಡಿಸಿ ಅವರನ್ನು ವಿದೇಶಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದ್ದರು. ಅದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಂಧಿತ ಆರೋಪಿಗಳಿಂದ 57 ಲಕ್ಷ ನಗದು 1.5 ಕೋಟಿ ಡಿಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಮನ್ಸೂರ್ ಚೆನ್ನೈನಲ್ಲಿದ್ದುಕೊಂಡು ಅನ್ಬುಗೆ ಹಣಕಾಸಿನ ನೆರವು ನೀಡುತ್ತಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಈ ಗ್ಯಾಂಗ್ ನೇಪಾಳದಲ್ಲಿರುವ ಸಂಜೀವ್ ಎನ್ನುವವನ್ನು ಭೇಟಿಯಾಗಿತ್ತು. ಸಂಜೀವ್ ಎಲ್ಟಿಟಿಇ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಬಂಧಿತ ಲಂಕಾ ಕ್ರಿಮಿನ್ಸ್ ಎಕೆ -47 ಬಳಸೋದನ್ನೂ ಸಹ ಟ್ರೈನಿಂಗ್ ಪಡೆದುಕೊಂಡಿದ್ದರು. ಅಂತೆಯೇ ಸಂಜೀವ್ ಜೊತೆ ಸೇರಿ ವಿಧ್ವಂಸಕ ಕೃತ್ಯ ಎಸೆಗಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.
ಅನುಮಾನಕ್ಕೆ ಪುಷ್ಟಿ ಎಂಬಂತೆ ಈ ಗ್ಯಾಂಗ್, ನೇಪಾಳದ ಸಂಜೀವ್ ಜೊತೆ ಮಾತುಕತೆ ನಡೆಸಿರುವ ಸಂಭಾಷಣೆ ಕೂಡ ಲಭ್ಯವಾಗಿದೆ. ಈ ಮಾತುಕತೆಯು ಶ್ರೀಲಂಕಾದ ಪ್ರಾದೇಶಿಕ ಭಾಷೆಯಲ್ಲಿದೆ. ಹೀಗಾಗಿ ಟ್ರಾನ್ಸ್ಲೇಟರ್ ಸಹಾಯ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ.. ಬೆಂಗಳೂರಿನಲ್ಲಿ ವಾಸ ಮಾಡಲು ಅವಕಾಶ ಕೊಟ್ಟಿದ್ದು ಪರಮೇಶ್. ಮನ್ಸೂರ್ ಎಂಬಾತನನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಜೊತೆಗೆ ಪಾಸ್‌ಪೋರ್ಟ್ ಇತರೆ ದಾಖಲೆಗಳಿಗೆ ಸಹಾಯ ಮಾಡ್ತಿದ್ದ ಅನ್ಬೂನನ್ನೂ ಬಂಧಿಸಲಾಗಿದೆ. ಬಂಧಿತ ಜಲಾಲ್ ಶ್ರೀಲಂಕಾದಲ್ಲಿ ಡ್ರಗ್ಸ್ ಡೀಲರ್ ಆಗಿದ್ದ. ಈತನಿಗೆ ಕ್ರಿಮಿನಲ್ ಹಿನ್ನಲೆ ಇದೆ. ಯಾವ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದರು ಅನ್ನೋದು ತನಿಖೆಯಿಂದ ತಿಳಿಯಬೇಕಿದೆ. ಇಲ್ಲಿಯವರೆಗೂ ಆರು ಜನರನ್ನು ಬಂಧಿಸಲಾಗಿದೆ ಎಂದರು.
ಶ್ರೀಲಂಕಾದ ಸುಪಾರಿ ಕಿಲ್ಲರ್ಸ್ಗಳಾದ ಕಸನ್ ಕುಮಾರ್ ಸನಕ, ಅಮಿಲಾ ನೋವಾನ್ ಮತ್ತು ರಂಗಪ್ರಸಾದ್ ಎಂಬುವವರು ವೀಸಾ ಇಲ್ಲದೇ ಬೋಟ್ ಮುಖಾಂತರ ಭಾರತಕ್ಕೆ ನುಸುಳಿ ಬಂದಿದ್ದರು. ಇವರಿಗೆ ರೌಡಿಶೀಟರ್ ಜೈ ಪರಮೇಶ್ ಆಶ್ರಯ ನೀಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ರೌಡಿಶೀಟರ್ ನಿವಾಸದ ಮೇಲೆ ದಾಳಿ ಮಾಡಿದ ಸಿಸಿಬಿ, ನಾಲ್ವರನ್ನು ನಿನ್ನೆ ಬಂಧಿಸಲಾಗಿದೆ. ಜಲಾನ್ ಎಂಬಾಂತ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಕಳೆದ 20 ದಿನಗಳ ಹಿಂದೆ ಭಾರತಕ್ಕೆ ಎಂಟ್ರಿಯಾಗಿದ್ದ ಇವರು, ನಂತರದ ದಿನಗಳಲ್ಲಿ ಬೆಂಗಳೂರಿಗೆ ಬಂದಿದ್ದರು. ನಗರದ ಯಲಹಂಕ ಠಾಣೆ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿ ವಾಸ್ತವ್ಯ ಹೂಡಿದ್ದರು.
ಕಸನ್ ಕುಮಾರ್ ಮೇಲೆ ನಾಲ್ಕು ಕೊಲೆ ಪ್ರಕರಣ, ಅಮಿಲಾ ನೋವಾನ್ ಮೇಲೆ ಐದು ಕೇಸ್, ರಂಗ ಪ್ರಸಾದ್ ಮೇಲೆ ಎರಡು ಕೊಲೆ ಮತ್ತು ಎರಡು ಹಲ್ಲೆ ಪ್ರಕರಣಗಳಿವೆ. ಬಂಧಿತರಿಂದ 13 ಮೊಬೈಲ್ ಫೋನ್, ಶ್ರೀಲಂಕಾ ವಿಳಾಸದ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟಿಂಗ್ಸ್, ಹಲವು ಮಂದಿಯ ಆಧಾರ್ ಕಾರ್ಡ್ ಝೆರಾಕ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ವಶಕ್ಕೆ ಪಡೆದಿರುವ 13 ಫೋನ್ಗಳನ್ನು FSLಗೆ ಕಳುಹಿಸಲಾಗಿದೆ. ಇವರ ಫ್ಲಾನಿಂಗ್ ಏನು, ಯಾವ ಯಾವ ಗ್ರೂಪ್ಗಳಲ್ಲಿ ಸಕ್ರಿಯವಾಗಿದ್ದರು. ಮಾತ್ರವಲ್ಲ ಇವರ ಮುಂದಿನ ಪ್ಲಾನ್ ಏನಾಗಿತ್ತು ಅನ್ನೋದ್ರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…