ಜನ ಮನದ ನಾಡಿ ಮಿಡಿತ

Advertisement

ಮೂಡಬಿದಿರೆ: ಯಕ್ಷಗಾನದ ನೇಪಥ್ಯ ಕಲಾವಿದ ಬೊಕ್ಕಸ ಜಗನ್ನಾಥ ರಾವ್ ನಿಧನ

ಮೂಡಬಿದಿರೆ: ನಾಟಕ, ಯಕ್ಷಗಾನ ವೇಷ ಭೂಷಣಗಳ ತಯಾರಕ, ಕಲಾವಿದ ಬೊಕ್ಕಸ ಜಗನ್ನಾಥ ರಾವ್ (76) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.

ಮೂಡುಬಿದಿರೆ ಚೌಟರ ಅರಮನೆಯ ಬೊಕ್ಕಸದ ಲೆಕ್ಕ ಬರೆಯುತ್ತಿದ್ದ ವಂಶದ ಕುಡಿಯಾಗಿರುವ ಬೊಕ್ಕಸ ಜಗನ್ನಾಥ ರಾವ್ ಅವರು ತನ್ನ 12ನೇ ವಯಸ್ಸಿನಿಂದಲೇ ತನ್ನ ತಂದೆಯ ಜತೆಗೂಡಿ ಟೈಲರಿಂಗ್ ಜತೆಗೆ ವೇಷಭೂಷಣ ಹೊಲಿಯುವ, ಮಣಿಸರಕು ಪೋಣಿಸುವ, ಕಿರೀಟಾದಿ ತಯಾರಿಸುವ ಕಲೆಗಳಲ್ಲಿ ತೊಡಗಿಸಿಕೊಂಡಿದ್ದರು.

ಕಲಾವಿದರಾಗಿದ್ದ ಮೂಡುಬಿದಿರೆ ದಿ.ಲಾಡಿ ಕೃಷ್ಣ ಶೆಟ್ಟಿ ಅವರು ಸುದೀರ್ಘ ಕಾಲ ತಮ್ಮ ಮೇಕಪ್ ಕೈಯಾಗಿದ್ದರು.
ಕುರಿಯ ವಿಠಲ ಶಾಸ್ತ್ರಿಯವರ ಒಡನಾಟದಿಂದಾಗಿ ಧರ್ಮಸ್ಥಳ ಮೇಳದ ಸಂಪರ್ಕ ಲಭಿಸಿ ಮೇಳಕ್ಕೆ ಪ್ರಥಮವಾಗಿ ವೇಷಭೂಷಣ ತಯಾರಿಸಿಕೊಟ್ಟಿದರು. ಬೇತಾಳದ ವೇಷ, ಛದ್ಮವೇಷ, ಮೆರವಣಿಗೆಗೆ ಬೇಕಾದ ವೇಷಭೂಷಣಣಗಳನ್ನು ತಯಾರಿಸುವಲ್ಲಿ, ಮಕ್ಕಳ ವೇಷ, ಮದುವೆ ಮಂಟಪದ ನಿರ್ಮಾಣ ಆಲಂಕಾರದಲ್ಲಿ ಗಮನ ಸೆಳೆದಿದ್ದರು.

ನೇಪಥ್ಯ ಕಲಾವಿದರಾಗಿ ಆರು ದಶಕಗಳಿಗೂ ಮಿಗಿಲಾದ ಅನುಭವ, ಭಾರತದಾದ್ಯಂತ ತಿರುಗಾಟ ನಡೆಸಿದವರು. ಶೇಣಿ, ಸಾಮಗರು, ಕುಂಬ್ಳೆ, ಎಂಪೆಕಟ್ಟೆ, ಪುತ್ತೂರು ನಾರಾಯಣ ಹೆಗ್ಡೆ ಸಹಿತ ಹಲವು ಕಲಾವಿದರ ನಿಕಟ ಸಂಪರ್ಕವನ್ನು ಹೊಂದಿದ್ದರು. , ಶಾಲೆ, ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ, ಕಲಾಸಂಘಗಳ ಆಟಗಳಲ್ಲಿ ತಮ್ಮ ವೇಷಭೂಷಣಗಳು ಮೆರೆದಿದೆ. ಮೂಡುಬಿದಿರೆಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಸಹಿತ ಹಲವಾರು ಕಡೆಗಳಲ್ಲಿ ಸನ್ಮಾನಕ್ಕೆ ಪಾತ್ರರಾಗಿದ್ದರು.
ಮೂಡುಬಿದಿರೆಯ ನಾಗರಕಟ್ಟೆಯಲ್ಲಿ ವಾಸವಾಗಿದ್ದ ಅವರು ಪತ್ನಿ ಸತ್ಯವತಿ ಸಹಿತ ಸಹೋದರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!