ಬಂಟ್ವಾಳ: ಪೋಲೀಸ್ ಠಾಣೆಯ ಕಾವಲು ಕಾಯುತ್ತಿದ್ದ ” ಬೊಗ್ಗಿ” ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಗೆ ಠಾಣೆಯ ಪೋಲೀಸರು ಕಣ್ಣೀರು ಹಾಕಿದ ಅಪರೂಪದ ಸನ್ನಿವೇಶ ನಡೆಯಿತು.
ಇದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದ ಘಟನೆ.
ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಸುಮಾರು 7 ವರ್ಷಗಿಂತಲೂ ಹೆಚ್ಚಿನ ಅವಧಿಯಿಂದ ಪೋಲೀಸ್ ಠಾಣೆಯ ಸದಸ್ಯರಾಗಿದ್ದು ರಾತ್ರಿ ಪಾಳಿಯಲ್ಲಿ ಕಾವಲುಗಾರನಂತೆ ಶಿಸ್ತಿನ ಕೆಲಸ ಮಾಡುತ್ತಿದ್ದ ಹೆಣ್ಣು ನಾಯಿ ಕಾರು ಅಪಘಾತದಲ್ಲಿ ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆ ಠಾಣೆಯ ಅವರಣದಲ್ಲಿಯೇ ಸಾವನ್ನಪ್ಪಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆ ಕಾರಿನಲ್ಲಿ ಬಂದಿದ್ದ ವ್ಯಕ್ತಿ ತನ್ನ ಕೆಲಸ ಮುಗಿಸಿ ವಾಪಸು ಹೋಗುವ ವೇಳೆ ಕಾರನ್ನು ರಿವರ್ಸ್ ತೆಗೆಯುವಾಗ ಅಲ್ಲೇ ಮಲಗಿದ್ದ ನಾಯಿಯ ಮೇಲೆ ಆತನಿಗೆ ಗೊತ್ತಿಲ್ಲದೆ ಕಾರು ಹರಿದಿದೆ. ಗಂಭೀರವಾಗಿ ಗಾಯಗೊಂಡ ನಾಯಿ ಸ್ಥಳದಲ್ಲಿ ಯೇ ಸಾವನ್ನಪ್ಪಿದೆ.
ಘಟನೆಯನ್ನು ಕಂಡ ನಗರ ಠಾಣೆಯ ಪೋಲೀಸರು ಕಣ್ಣೀರು ಹಾಕಿದರು. ಬಳಿಕ ನಾಯಿಯನ್ನು ವಿಶೇಷ ಗೌರವ ನೀಡಿ ಮಣ್ಣು ಮಾಡಲಾಯಿತು.
ನಾಯಿ ಸತ್ತಂತೆ ಒಂದು ಮಾತಿದೆ ಸಾಮಾನ್ಯ ನಾಯಿಗಳು ಸತ್ತಾಗ ದೊಡ್ಡ ವಿಚಾರವಾಗುವುದಿಲ್ಲ. ಆದರೆ ನಗರ ಪೋಲೀಸ್ ಠಾಣೆಯ ನಾಯಿ ಸತ್ತಾಗ ಪೋಲೀಸರ ಕಣ್ಣು ತೇವವಾಯಿತು. ಹೂ ಮಾಲೆಯೊಂದಿಗೆ ನಾಯಿಯ ಅಂತ್ಯ ಸಂಸ್ಕಾರ ಮಾಡಿದರು. ಅನೇಕ ವರ್ಷಗಳಿಂದ ಈ ನಾಯಿ ಠಾಣೆಯ ಮೆಟ್ಟಿಲ ಮೇಲೆ ಮಲಗುತ್ತಿತ್ತು.
ಠಾಣೆಯೇ ಇದರ ಮನೆಯಾಗಿತ್ತು. ಬಹಳ ಬುದ್ದಿಯ ನಾಯಿಯಾಗಿ ಎಲ್ಲರ ಅಚ್ಚುಮೆಚ್ಚಿನ ಬೊಗ್ಗಿ ಎಂದೇ ಪ್ರಸಿದ್ಷಿಯಾಗಿತ್ತು. ಪೋಲೀಸರಲ್ಲದೆ ಹೊರಗಿನವರು ಯಾರೇ ಅಪರಿಚಿತ ವ್ಯಕ್ತಿ ಗಳು ಬಂದರು ಬೊಗಳುವ ಈ ಬೊಗ್ಗಿ ಇನ್ನಿಲ್ಲ ಎಂದು ಪೋಲೀಸರು ಬೇಸರ ವ್ಯಕ್ತಪಡಿಸುತ್ತಾರೆ.
ಯಾರಿಗೂ ಈ ವರೆಗೆ ಕಚ್ಚಿಲ್ಲ, ಆದರೆ ಅಪರಿಚಿತರು ಯಾರು ಬಂದರೂ ಬಂದಿದ್ದಾರೆ ನೋಡಿ ಬೊಗಳುವ ಮೂಲಕ ಪೋಲೀಸರನ್ನು ಎಚ್ಚರಿಸುವ ಕೆಲಸ ಮಾಡುತ್ತಿತ್ತು.ಒಂದು ದಿನವೂ ಠಾಣೆಯನ್ನು ಬಿಟ್ಟು ಹೊರಗೆ ಹೋಗಿದ್ದಿಲ್ಲ ಎಂದು ಹೇಳುತ್ತಾರೆ. ನಾಯಿಯನ್ನು ಹೂತು ಹಾಕಿದ ಸ್ಥಳದಲ್ಲಿ ನಾಯಿಯ ನೆನಪಿಗೋಸ್ಕರ ಯಾವುದಾದರೂ ಪ್ರಾಣಿಗಳಿಗೆ ಆಹಾರ ನೀಡುವ ಹಣ್ಣಿನ ಮರವೊಂದನ್ನು ನೆಡವ ಸಂಕಲ್ಪವನ್ನು ಪೋಲೀಸರು ಮಾಡಿದ್ದಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…