ಜನ ಮನದ ನಾಡಿ ಮಿಡಿತ

Advertisement

ಎರಡನೇ ಪತ್ನಿ ಮನೆ ಮೇಲಿಂದ ಬಿದ್ದ ಉದ್ಯಮಿ ಸಾವು

ಕಟ್ಟಡದ ಮೇಲಿಂದ ಉದ್ಯಮಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ನಾಗರಬಾವಿ ಬಳಿ ನಡೆದಿದೆ. ಸಾವನ್ನಪ್ಪಿರೋ ಉದ್ಯಮಿಯನ್ನು 62 ವರ್ಷದ ಮಾರಾಂಜಿನಪ್ಪ ಎಂದು ಗುರುತಿಸಲಾಗಿದೆ.

ಉದ್ಯಮಿ ಮಾರಾಂಜಿನಪ್ಪ ಅವರಿಗೆ ಎರಡನೇ ಮದುವೆಯಾಗಿದ್ದು, 2ನೇ ಪತ್ನಿ ಮನೆ ಮೇಲಿಂದ ಬಿದ್ದು ಸಾವನ್ನಪ್ಪಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇಂದು ತಡರಾತ್ರಿ 3 ಗಂಟೆ ಸುಮಾರಿಗೆ ಮಾರಾಂಜಿನಪ್ಪ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಕಟ್ಟಡದಿಂದ ಬಿದ್ದ ಉದ್ಯಮಿಯನ್ನ ಆತನ ಎರಡನೇ ಪತ್ನಿಯೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾರಾಂಜಿನಪ್ಪ ಸಾವನ್ನಪ್ಪಿದ್ದಾರೆ.

ಉದ್ಯಮಿ ಮಾರಾಂಜಿನಪ್ಪ ಅವರು ಎರಡನೇ ಪತ್ನಿ ಮನೆಯಿಂದ ಬಿದ್ದು ಸಾವನ್ನಪ್ಪಿದ್ದು, ಮಾರಾಂಜಿನಪ್ಪ ಕುಟುಂಬಸ್ಥರು ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ ಮೇಲಿಂದ ಬಿದ್ದಿರೋ ಮಾರಾಂಜಿನಪ್ಪ ಅವರ ಸಾವು ಅನುಮಾನಾಸ್ಪದ ರೀತಿಯಲ್ಲಿದೆ. ಎರಡನೇ ಪತ್ನಿ ಮೇಲೆ ಮೃತ ಮಾರಾಂಜಿನಪ್ಪ ಮೊದಲನೇ ಪತ್ನಿ ಕೊಲೆ ಆರೋಪ ಮಾಡಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!