ಜನ ಮನದ ನಾಡಿ ಮಿಡಿತ

Advertisement

ತುಂಬೆಯಲ್ಲಿ ಡಿವೈಡರ್ ನ ಮೇಲೆ ಕೂಲಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹರಿದ ಕಾರು..!

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಧ್ಯೆ ತುಂಬೆ ಎಂಬಲ್ಲಿ ಡಿವೈಡರ್ ನ ಮೇಲೆ ಕೂಲಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾರು ಹರಿದು ಗಾಯಗೊಂಡ ಘಟನೆ ನಡೆದಿದೆ.

ಹಾವೇರಿ ಮೂಲದ ನಾಗರಾಜ್ ಲಮಾಣಿ ಗಾಯಗೊಂಡ ಕಾರ್ಮಿಕ. ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡ ಡಿವೈಡರ್ ಮೇಲೆ ಹತ್ತಿದೆ. ಈ ಸಂದರ್ಭದಲ್ಲಿ ಡಿವೈಡರ್ ನಲ್ಲಿ ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಡಿಕ್ಕಿಯಾಗಿದೆ. ಮತ್ತೆ ಕಾರು ವಿರುದ್ದ ರಸ್ತೆಗೆ ಮುನ್ನುಗ್ಗಿದೆ. ಅದೇ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಕಾರು ಮತ್ತು ಬೈಕ್ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಬೈಕ್ ಜಖಂಗೊಂಡಿದೆ. ಅದರೆ ಎರಡು ವಾಹನದಲ್ಲಿದ್ದ ಸವಾರರಿಗೆ ಯಾವುದೇ ಗಾಯವಾಗಿಲ್ಲ. ಡಿವೈಡರ್ ‌ಮೇಲೆ ಗಾಯಗೊಂಡ ಕೂಲಿ ಕಾರ್ಮಿಕನನ್ನು ಮಂಗಳೂರು ‌ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಸುತೇಶ್, ಎ.ಎಸ್. ಐ.ವಿಜಯ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ಮಂಗಳೂರು: ಮಂಗಳೂರಿನಲ್ಲಿ ಆ.13ರಂದು ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಮೊದಲ ಶಾಖೆ ಆರಂಭ

ಮಂಗಳೂರು: ಕದ್ರಿ ಬಂಜನ್‌ ಕ್ಷೇತ್ರದಲ್ಲಿ ನಿವೃತ್ತ ವೀರ ಯೋಧರು, ವೀರನಾರಿಯರಿಗೆ ಸನ್ಮಾನ…!

ಮಂಗಳೂರು: ಡಿಸಿ ಮನ್ನಾ ಭೂಮಿ ಹಂಚಿಕೆಗೆ ಆಗ್ರಹ: ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ…!

ವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ಜಖಂ; ಲಕ್ಷಾಂತರ ರೂ. ನಷ್ಟ

ತೊಕ್ಕೊಟ್ಟು: ಬಾರ್ ಬಳಿ ತಲವಾರು ಬೀಸಿ ಆತಂಕ ಸೃಷ್ಟಿಸಿದ ರೌಡಿಶೀಟರ್ ಬಂಧನ…!

ಟೆಹ್ರಾನ್: ಖಮೇನಿ ಭೇಟಿಯಲ್ಲೇ ಹೊಸ ರಹಸ್ಯ! ‘ನೀವೇ ಖಮೇನಿಯೇ?’ ಎಂದು ಪ್ರಶ್ನಿಸಿದ ಇರಾನ್ ಅಧ್ಯಕ್ಷ…!

ಬ್ಯಾಂಕಾಕ್: ಥೈಲ್ಯಾಂಡ್ ಶಾಲೆಯಲ್ಲಿ ಗುಂಡಿನ ದಾಳಿ: ಶಿಕ್ಷಕ ಸಾವು, 15 ಮಂದಿಗೆ ಗಾಯ…!

ಬಂಟ್ವಾಳ: ಆಳ್ವಾಸ್ ಪ್ರಗತಿ-2026 ಉದ್ಯೋಗ ಮೇಳಕ್ಕೆ ಬಂಟ್ವಾಳದಿಂದ ಉಚಿತ ಬಸ್…!

error: Content is protected !!