ಜನ ಮನದ ನಾಡಿ ಮಿಡಿತ

Advertisement

ಸಂತ ಜೂದರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಚರ್ಚ್ ಸಭಾಭವನದಲ್ಲಿ ಸಾಮೂಹಿಕ ವಿವಾಹ

ಮುಲ್ಕಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರ ಹಾಗೂ ಸಂತ ಜೂದರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಚರ್ಚ್ ಸಭಾಭವನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಎಲೋಶಿಯಸ್ ಪಾವ್ಲ್ ಡಿಸೋಜಾ ಮಾತನಾಡಿ ಪುಣ್ಯಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯಲಿ ಇಂದು ಆಶೀರ್ವಚನ ನೀಡಿದರು.


ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ಧರ್ಮಗುರು ಮೆಲ್ವಿನ್ ನೊರೋಹ್ನ , ಫಾ.ರಾಬರ್ಟ್ ಪಕ್ಷಿಕೆರೆ
ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶೈಲಾ ಡಿಸೋಜ, ಕಾರ್ಯದರ್ಶಿ ಸುನಿಲ್ ಮೊರಾಸ್, ಚರ್ಚ್ ನ ಗೌರವ ಸದಸ್ಯ ಹಾಗೂ ಕೆಮ್ರಾಲ್ ಗ್ರಾಪಂ ಸದಸ್ಯ ಜಾಕ್ಸನ್ ಸಲ್ದಾನ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೂವರು ನೂತನ ಜೋಡಿಗಳಾದ ಡೆನ್ನಿಸ್ ಕುಟಿನೊ ಮಂಜೇಶ್ವರ – ಆರ್ಸಿಲ್ಲ ಅಶ್ವಿತಾ ಪಾಯಸ್ ಮಡಂತ್ಯಾರ್; ಮ್ಯಾಕ್ಸಿಮ್ ಮೊರಾಸ್ ಸಿದ್ದಕಟ್ಟೆ-ಪ್ರೀತಿಕ ಪಿಂಟೊ ವಿಜಯಡ್ಕ; ರೋಷನ್ ಫೆರ್ನಾಂಡಿಸ್ ಕಾಟಿಪಳ್ಳ- ಅವಿಲ್ಲಾ ಜ್ಯೋತಿ ವರೆದ ಪಾವೂರು ರವರು ಗುರು ಹಿರಿಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಹಸೆ ಮಣೆ ಏರಿದರು. ರಾಬರ್ಟ್ ಡಿಸೋಜಾ ಪಕ್ಷಿಕೆರೆ ನಿರೂಪಿಸಿದರು.

Leave a Reply

Your email address will not be published. Required fields are marked *

ಟೆಹ್ರಾನ್: ಖಮೇನಿ ಭೇಟಿಯಲ್ಲೇ ಹೊಸ ರಹಸ್ಯ! ‘ನೀವೇ ಖಮೇನಿಯೇ?’ ಎಂದು ಪ್ರಶ್ನಿಸಿದ ಇರಾನ್ ಅಧ್ಯಕ್ಷ…!

ಬ್ಯಾಂಕಾಕ್: ಥೈಲ್ಯಾಂಡ್ ಶಾಲೆಯಲ್ಲಿ ಗುಂಡಿನ ದಾಳಿ: ಶಿಕ್ಷಕ ಸಾವು, 15 ಮಂದಿಗೆ ಗಾಯ…!

ಬಂಟ್ವಾಳ: ಆಳ್ವಾಸ್ ಪ್ರಗತಿ-2026 ಉದ್ಯೋಗ ಮೇಳಕ್ಕೆ ಬಂಟ್ವಾಳದಿಂದ ಉಚಿತ ಬಸ್…!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಅಪಘಾತ: ಒಂದೇ ಕುಟುಂಬದ ಆರು ಮಂದಿಗೆ ಗಾಯ…!

ಬಂಟ್ವಾಳ: ಬಿ.ಸಿ.ರೋಡ್ ಎನ್.ಜಿ. ಸರ್ಕಲ್‌ನಲ್ಲಿ ಭೀಕರ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತ್ಯು…!

ಮಂಗಳೂರು: ನ್ಯುಮೋನಿಯಾಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಬಿಸಿರೋಡು–ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಿಂತಿಲ್ಲ: ಕೆಎನ್‌ಆರ್‌ಸಿಎಲ್ ಸ್ಪಷ್ಟನೆ

ವಾಷಿಂಗ್ಟನ್: ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಮರುಪಾವತಿ..!

ಟೆಹ್ರಾನ್: ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟ; ಇರಾನ್ ಅಧ್ಯಕ್ಷರ ಬಹಿರಂಗ ಹೇಳಿಕೆ…!

error: Content is protected !!