ಜನ ಮನದ ನಾಡಿ ಮಿಡಿತ

Advertisement

ಮೂಡುಬಿದಿರೆ: ಯಶಸ್ಸು ಬುದ್ಧಿಮತ್ತೆ- ಭಾವನಾತ್ಮಕತೆಯ ನಂಟು’

ಮೂಡುಬಿದಿರೆ: ‘ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ. ಪ್ರತಿ ಹಂತದ ಕಲಿಕೆ ಹೊಸದನ್ನು ಕಲಿಸುತ್ತದೆ. ಕಲಿಯುವ ಮನಸ್ಸು ನಮ್ಮದಾಗಿರಬೇಕು ಎಂದು ಖ್ಯಾತ ವೈದ್ಯ ಹಾಗೂ ಕರ್ನಾಟಕ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಡಾ. ರಾಮಚಂದ್ರ ಕೆ. ಜೋಯಿಷಿ ಹೇಳಿದರು.


ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ ಮತ್ತು ಫಿಸಿಯೋಥೆರಪಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಿಕೆ ಕೇವಲ ಪಠ್ಯಕ್ಕೆ ಸೀಮಿತವಲ್ಲ. ಅದು ವ್ಯಾಪಕ. ಅದು ಬದುಕಿನ ಕೊನೆ ತನಕದ ಕ್ರಿಯೆ. ಯಶಸ್ಸಿನ ಪಯಣದಲ್ಲಿ ಪ್ರತಿಭೆ, ಜ್ಞಾನ, ಕಠಿಣ ಪರಿಶ್ರಮ, ಆತ್ಮಸ್ಥೈರ್ಯ, ಆತ್ಮ ವಿಶ್ವಾಸ ಬಹಳ ಮುಖ್ಯ. ಬದುಕು ಹೂವಿನ ಹಾಸಿಗೆಯಲ್ಲ ಎಂದರು.


ಯಶಸ್ಸಿನಲ್ಲಿ ಬುದ್ಧಿಮತ್ತೆ ಮತ್ತು ಭಾವನಾತ್ಮಕತೆಯ ನಂಟು ಹಾಗೂ ಜ್ಞಾನದ ಬಳಕೆ ಅಗತ್ಯ. ಕೇವಲ ಬುದ್ಧಿಮತ್ತೆಯೇ ಹೆಚ್ಚಿದರೂ ಸೋಲುತ್ತೇವೆ. ಭಾವನೆಗಳ ಸ್ಪಂದನೆ ಇರಬೇಕು. ನಾವು ಏನೇ ಆದರೂ, ಪರಿಸರಕ್ಕೆ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಆಳ್ವಾಸ್ ಹೆಲ್ತ್ ಸೆಂಟರ್‌ನ ಆರಂಭದ ದಿನಗಳಲ್ಲಿ ಕೆಲಸ ಮಾಡಿದ ನೆನಪನ್ನು ಹಂಚಿಕೊಂಡ ಅವರು, ಇಂದು ಈ ಹೆಲ್ತ್ ಸೆಂಟರ್ ಮೂಡುಬಿದಿರೆ ಭಾಗದ ಜನರಿಗೆ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ‘ವೈದ್ಯಕೀಯ ಚಿಕಿತ್ಸಾ ಪದ್ಧತಿಯು ಒಂದು ರಥದ ಹಾಗೆ. ಇಲ್ಲಿ ಕೇವಲ ವೈದ್ಯರು ಮಾತ್ರವಲ್ಲ, ಎಲ್ಲರೂ ಮುಖ್ಯ. ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ವಿಭಾಗಗಳ ಮಧ್ಯೆ ಹೋಲಿಕೆ ಸಲ್ಲದು. ನಾವು ಆಯ್ಕೆ ಮಾಡಿದ ಕೋರ್ಸ್ನಲ್ಲಿ ನಮ್ಮ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಬೇಕು. ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು’ ಎಂದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!