ಜನ ಮನದ ನಾಡಿ ಮಿಡಿತ

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಗ್ಗೆ ಅವಹೇಳನಕಾರಿ ಬರಹಗಳನ್ನು, ಧ್ವನಿ ಮುದ್ರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿ ಶಾಂತಿ ಕದಡಿ ಬೆದರಿಕೆ ಒಡ್ಡಿದವರ ವಿರುದ್ಧ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು


ಅಕ್ಟೋಬರ್ ದಿನಾಂಕ 28 ಮತ್ತು 29 ರಂದು ಉಡುಪಿಯಲ್ಲಿ ಅಭೂತಪೂರ್ವಾಗಿ ವಿಶ್ವ ಬಂಟರ ಸಮ್ಮೇಳನವು ಯಶಸ್ವಿಯಾಗಿ ಜರಗಿದ ನಂತರ ಅತ್ಯಂತ ನೋವು ಉಂಟಾಗುವ ರೀತಿಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳ, ಗೃಹ ಸಚಿವರ, ಜನಪ್ರತಿನಿಧಿಗಳ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಸಮಾಜಘಾತುಕ ವ್ಯಕ್ತಿ ಜಾಲತಾಣಗಳಲ್ಲಿ ಅಸಭ್ಯವಾಗಿ ವರ್ತಿಸಿ ಬೆದರಿಕೆ ಹಾಗೂ ಮಾನಹಾನಿ ಬರಹ ಹಾಕಿರುವುದು ಇದು ಸಮಾಜ ಬಾಹಿರ ಕೃತ್ಯವಾಗಿದ್ದು ಇಂತಹ ಘಾತಕ ವ್ಯಕ್ತಿಯ ವಿರುದ್ಧ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಒಕ್ಕೂಟದ ಜೊತೆ ಕಾರ್ಯದರ್ಶಿ ಹಾಗೂ ಬಂಟ್ವಾಳ ವಲಯ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ರಂಗೋಲಿ, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸುಧಾಕರ್ ಪೂಂಜ ಹಾಗೂ ಪದಾಧಿಕಾರಿಗಳು, ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟ್ವಾಳ ವಲಯ ಬಂಟರ ಸಂಘದ ಪದಾಧಿಕಾರಿಗಳು, ಸಾಲೆತ್ತೂರು ವಲಯ ಬಂಟರ ಸಂಘದ ಜೊತೆ ಕಾರ್ಯದರ್ಶಿ ಅಮರೇಶ್ ಶೆಟ್ಟಿ ತಿರುವಾಜೆ, ಹಾಗೂ ವಿಟ್ಲ ವಲಯದ ಭಾಸ್ಕರ್ ಶೆಟ್ಟಿಯವರನ್ನು ಒಳಗೊಂಡ ತಂಡ ದೂರು ನೀಡಲಾಗಿದೆ.

ದೂರು ಪಡೆದು ತಕ್ಷಣದಿಂದ ತನಿಖೆಯನ್ನು ಆರಂಭಿಸಿ ಯಾರು ಈ ಸಮಾಜದ ಸ್ವಾಸ್ಥ್ಯವನ್ನು ಕೆದಡುತ್ತಾರೋ ಅವರ ವಿರುದ್ಧ ಕಾನೂನು ಕ್ರಮವನ್ನ ಜರಗಿಸುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿದೆ.ಮುಂದೆ ಈ ರೀತಿಯ ದುರ್ನಡತೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳಲಿದೆ. ಹಾಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಡ ಈ ಕೆಟ್ಟ ಚಾಳಿಯ ವ್ಯಕ್ತಿಯ ನಡವಳಿಕೆ ಮತ್ತು ಅದನ್ನು ಜಾಲತಾಣಗಳಲ್ಲಿ ಪ್ರಚುರಪಡಿಸಿ ಶೇರ್ ಮಾಡಿದವರ ಮೇಲೆಯೂ ಕೂಡ ಕ್ರಮ ಜರುಗಿಸಲು ಇಲಾಖೆಯಲ್ಲಿ ವಿನಂತಿಸಲಾಗಿದೆ. ಈ ಪ್ರಕರಣವು ಅತ್ಯಂತ ಗಂಭೀರವಾಗಿ ಪೊಲೀಸ್ ಇಲಾಖೆಯು ಪರಿಗಣಿಸಿ ಜನರ ಮಧ್ಯೆ ಉಂಟಾಗುವ ಸಾಮಾಜಿಕ ಕ್ಷೋಭೆಯನ್ನು ನಿಲ್ಲಿಸುವುದಾಗಿ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!