ಜನ ಮನದ ನಾಡಿ ಮಿಡಿತ

Advertisement

ಸುರತ್ಕಲ್ ಮಾರುಕಟ್ಟೆ ಕಾಮಗಾರಿ‌ ಪುನಾರಂಭಿಸಲು ನಗರಾಭಿವೃದ್ಧಿ ಸಚಿವರಿಗೆ ಇನಾಯತ್ ಅಲಿ ಮನವಿ

ನೆನೆಗುದಿಗೆ ಬಿದ್ದಿರುವ ಸುರತ್ಕಲ್ ಮಾರುಕಟ್ಟೆ ಸಂಕೀರ್ಣದ ಕಾಮಗಾರಿಯನ್ನು ಶೀಘ್ರವೇ ಪುನರಾಂಭಿಸುವಂತೆ ಮಂಗಳೂರಿಗೆ ಆಗಮಿಸಿದ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎಸ್. ಸುರೇಶ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮನವಿ ಮಾಡಿದರು.

ಸುರತ್ಕಲ್ ಮಾರುಕಟ್ಟೆ ಸಂಕೀರ್ಣ ಕಾಮಗಾರಿಗೆ 2013ರ ಸನ್ಮಾನ್ಯ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಅವಧಿಯಲ್ಲಿ ಅನುದಾನ ಮಂಜೂರುಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ನಂತರ ಕಾಮಗಾರಿಯು ಕುಂಟುತ್ತಾ ಸಾಗಿ ಅರ್ಧದಲ್ಲಿ ನಿಂತಿದೆ. ಕಾಮಗಾರಿ ವಿಳಂಬ ನೀತಿಯಿಂದಾಗಿ ಸುರತ್ಕಲ್ ಪ್ರದೇಶದ ಜನತೆಗೆ ಸರಿಯಾದ ಮಾರುಕಟ್ಟೆಯಿಲ್ಲದೇ ಸ್ಥಳೀಯರು ಹಾಗೂ ಮಧ್ಯಮ ಮತ್ತು ಬಡ ವರ್ಗದ ವ್ಯಾಪಾರಸ್ಥರು ತೊಂದರೆಗೊಳಗಾಗಿರುತ್ತಾರೆ ಎಂದು ಇನಾಯತ್ ಅಲಿ ತಮ್ಮ ಮನವಿಯಲ್ಲಿ ಸಚಿವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ಅನಿಲ್ ಕುಮಾರ್, ಮುಖಂಡರಾದ ಭಾಸ್ಕರ್ ಮೊಯಿಲಿ, ಪ್ರತಿಭಾ ಕುಳಾಯಿ, ಗಿರೀಶ್ ಆಳ್ವ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಕಿಬ್ ನಬಿ ಎಂಟ್ರಿ

ಬಿಹಾರದ ಸಹರ್ಸಾದಲ್ಲಿ ರೈಲು ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

error: Content is protected !!