ಪುತ್ತೂರು:ಹಿoದುತ್ವದ ನೆಲೆಯಲ್ಲಿ ಸಂಸದರಾಗಿ, ಪ್ರಭಾವಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕರಾದ ಸಂಜೀವ ಮಠಂದೂರು ಅವರು ಹೇಳಿದ್ದಾರೆ.

ಇವರು ಪುತ್ತೂರಿನ ರೋಟರಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತಾನಾಡಿ, 40 ಸಾವಿರದಿಂದ ಹೆಚ್ಚಳಗೊಂಡು 2.70 ಲಕ್ಷ ಮತಗಳಿಂದ ಗೆಲುವು ಸಾಧಿಸುವ ಮೂಲಕ ಜನರ ವಿಶ್ವಾಸ ಹಾಗೆನೇ ಅಭಿವೃದ್ಧಿ ಪರ ಕೆಲಸಗಳಿಂದ ಅವರು ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ ಅಂತ ಹೇಳಿದ್ದಾರೆ.



