ಜನ ಮನದ ನಾಡಿ ಮಿಡಿತ

Advertisement

ಫಿಲಿಪ್ಪೀನ್ಸ್‌ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇಕಡಾ 97ಕ್ಕೆ ಏರಿಕೆ: ಭಾರತದ ಸ್ಥಿತಿಯೇನು?

ಫಿಲಿಪ್ಪೀನ್ಸ್‌ ಸಾಕ್ಷರತೆಯ ಪ್ರಮಾಣವು ಶೇಕಡಾ 97ಕ್ಕೆ ಏರಿಕೆಯಾಗಿದ್ದು, ಕಳೆದ ಐದು ವರ್ಷಗಳಲ್ಲಿ ಶೇಕಡಾ 1.2 ರಷ್ಟು ಸುಧಾರಿಸಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.

ಮನಿಲಾ: ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಗೆ ಸಾಕ್ಷರತೆ ಅತ್ಯಂತ ನಿರ್ಣಾಯಕ. ಉತ್ತಮ ಶಿಕ್ಷಣ ಪಡೆದ ಮಕ್ಕಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕ ಕೊಡುಗೆ ನೀಡುತ್ತಾರೆ.

ಇದೀಗ, ಫಿಲಿಪ್ಪೀನ್ಸ್‌ನಲ್ಲಿ ಸಾಕ್ಷರತೆಯ ಪ್ರಮಾಣವು ಶೇಕಡಾ 97ಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ 1.2% ಸುಧಾರಿಸಿದೆ ಎಂದು ಅಲ್ಲಿನ ಸರ್ಕಾರ ಅಂಕಿಅಂಶ ನೀಡಿದೆ.

2020ರ ಜನಸಂಖ್ಯೆ ಮತ್ತು ವಸತಿ ಗಣತಿ ಸಮೀಕ್ಷೆಯ ಫಲಿತಾಂಶಗಳನ್ನು ಉಲ್ಲೇಖಿಸಿ ಫಿಲಿಪ್ಪೀನ್ಸ್‌ ಅಂಕಿಅಂಶ ಪ್ರಾಧಿಕಾರ (PSA) ನೀಡಿದ ಮಾಹಿತಿಯಂತೆ, ಐದು ವರ್ಷಕ್ಕಿಂತ ಮೇಲ್ಪಟ್ಟ 97.6 ಮಿಲಿಯನ್ ಫಿಲಿಪ್ಪೀನ್ಸ್‌ ಜನರಲ್ಲಿ 94.6 ಮಿಲಿಯನ್ ಸಾಕ್ಷರಸ್ಥರಾಗಿದ್ದಾರೆ. ಅವರು ದೇಶದ ಯಾವುದೇ ಭಾಷೆ ಅಥವಾ ಉಪಭಾಷೆಗಳಲ್ಲಿ ಸರಳ ಸಂದೇಶವನ್ನು ಓದುವುದು ಮತ್ತು ಬರೆಯಬಲ್ಲರು ಎಂದು ತಿಳಿಸಿದೆ.

ಮೆಟ್ರೋ ಮನಿಲಾ ಪ್ರದೇಶವು 98.9% ಅತ್ಯಧಿಕ ಸಾಕ್ಷರತೆ ದರ ಹೊಂದಿದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಮಿಂಡನಾಒಹಾದ್‌ನಲ್ಲಿನ ಬ್ಯಾಂಗ್‌ಸಮೊರೊ ಸ್ವಾಯತ್ತ ಪ್ರದೇಶವು 86.4 ಪ್ರತಿಶತದಷ್ಟು ಕಡಿಮೆ ಸಾಕ್ಷರತೆಯ ದರ ಹೊಂದಿದೆ. ಹಾಗೆಯೇ, 2020ರಲ್ಲಿ ಸಾಕ್ಷರತೆಯ ಪ್ರಮಾಣವು ಮಹಿಳೆಯರಲ್ಲಿ (ಶೇಕಡಾ 97.1) ಸ್ವಲ್ಪ ಹೆಚ್ಚಾಗಿದೆ, ಪುರುಷರ ಸಾಕ್ಷರತೆ ಶೇಕಡಾ (96.8) ಇದೆ. 2015 ರಲ್ಲಿದ್ದ ಸ್ಥಿತಿಯೇ ಈಗಲೂ ಮುಂದಿವರೆದಿದೆ ಎಂದು ಡೇಟಾದಿಂದ ತಿಳಿಯಬಹುದು.

ಮಾಹಿತಿಯ ಪ್ರಕಾರ, ಪ್ರತಿ ಆರು ಕಾಲೇಜು ಪದವೀಧರರಲ್ಲಿ ಒಬ್ಬರು ಶಿಕ್ಷಣ ವಿಜ್ಞಾನದಲ್ಲಿ ಪದವಿ ಹೊಂದಿದ್ದಾರೆ. ಪುರುಷರು ಮ್ಯಾನೇಜ್‌ಮೆಂಟ್ ಮತ್ತು ಅಡ್ಮಿನಿಸ್ಟ್ರೇಷನ್ ಕೋರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ, ಮಹಿಳೆಯರು ಶಿಕ್ಷಣ ವಿಜ್ಞಾನ ಕೋರ್ಸ್‌ಗಳನ್ನು ಆರಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!