ಜನ ಮನದ ನಾಡಿ ಮಿಡಿತ

Advertisement

ಕ್ಯಾಪ್ಟನ್ ಕೂಲ್ ಗೆ 42ನೇ ಹುಟ್ಟುಹಬ್ಬ!

ಭಾರತ ಕ್ರಿಕೆಟ್‌ ತಂಡದ ಯಶಸ್ವಿ ನಾಯಕ ಹಾಗೂ ‘ಕ್ಯಾಪ್ಟನ್​ ಕೂಲ್’ ಎಂದೇ ಜನಪ್ರಿಯರಾಗಿರುವ ಮಹೇಂದ್ರ ಸಿಂಗ್​ ಧೋನಿ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1981ರ ಜುಲೈ 7ರಂದು ಜನಿಸಿದ ಇವರು ಯಶಸ್ವಿ ನಾಯಕ ಮಾತ್ರವಲ್ಲದೇ ಯಶಸ್ವಿ ವಿಕೆಟ್​ ಕೀಪರ್​ ಕೂಡಾ ಆಗಿರುವುದು ಗೊತ್ತಿರುವ ಸಂಗತಿ. ಹೊರತುಪಡಿಸಿದಂತೆಯೂ ಅವರ ಕುರಿತು ಸಾಕಷ್ಟು ಕುತೂಹಲದ ವಿಚಾರಗಳಿವೆ..

ನಿಮಗಿದು ಗೊತ್ತೇ?

  • ಧೋನಿ ಕ್ರಿಕೆಟ್ ವೃತ್ತಿಜೀವನ ಡಕೌಟ್‌ನೊಂದಿಗೆ ಪ್ರಾರಂಭ!
  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಅತ್ಯಧಿಕ ಸ್ಕೋರ್ 224ರನ್. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ.
  • 2009 ಸೆ.30 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್​ ಮಾಡಿ ಮೊದಲ ವಿಕೆಟ್​ ಪಡೆದ ಧೋನಿ.
  • ಧೋನಿ ನಾಯಕನಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ. ಒಟ್ಟು 331 ಪಂದ್ಯಗಳ ಪೈಕಿ 60 ಟೆಸ್ಟ್‌, 199 ಏಕದಿನ, 72 ಟಿ20.
  • 2011ರಲ್ಲಿ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ. 2019ರಲ್ಲಿ ಕಾಶ್ಮೀರದಲ್ಲಿ ತಮ್ಮ ಘಟಕದೊಂದಿಗೆ ಸೇವೆ ಸಲ್ಲಿಸಲು ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರವಾಸ ತೊರೆದರು.
  • ಐಸಿಸಿಯ ಎಲ್ಲ 3 ಟ್ರೋಫಿಗಳನ್ನು ಜಯಿಸಿದ ವಿಶ್ವದ ಏಕೈಕ ನಾಯಕ. (ಟಿ20 ವಿಶ್ವಕಪ್ 2007, ಏಕದಿನ ವಿಶ್ವಕಪ್ 2011, ICC​​ ಚಾಂಪಿಯನ್​ ಟ್ರೋಫಿ 2013)​
  • ವಿಕೆಟ್​ ಕೀಪರ್​ ಆಗಿ ಅತಿ ಹೆಚ್ಚು ಸ್ಕೋರ್​ ( ಶ್ರೀಲಂಕಾ ವಿರುದ್ಧ 183ರನ್) ಗಳಿಸಿದ ಏಕೈಕ ಆಟಗಾರ. ​
  • ಯಶಸ್ವಿ ನಾಯಕನ ಹತ್ತನೇ ತರಗತಿ ಅಂಕ 66%, 12ನೇ ತರಗತಿ ಅಂಕ 56%
  • ಧೋನಿ ಶ್ರೀಮಂತ ಭಾರತೀಯ ಕ್ರಿಕೆಟರ್​. ಫೋರ್ಬ್ಸ್ ಪ್ರಕಾರ, 2021ರ ಹೊತ್ತಿಗೆ ನಿವ್ವಳ ಆಸ್ತಿ ಮೌಲ್ಯ 111 ಮಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದ್ದು, 2023ರಲ್ಲಿ 120 ಮಿಲಿಯನ್‌ (1,040 ಕೋಟಿ) ಎಂದು ಹೇಳಲಾಗಿದೆ.
  • ಧೋನಿಗೆ 2009ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ನೀಡಿ ಗೌರವಿಸಲಾಯಿತು. 2007ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವ ಪ್ರಶಸ್ತಿಯಾದ ‘ರಾಜೀವ್ ಗಾಂಧಿ ಖೇಲ್ ರತ್ನ’ ನೀಡಿ ಪುರಸ್ಕರಿಸಲಾಯಿತು.
  • ಟೈಮ್ ಮ್ಯಾಗಜೀನ್‌ನ ವಿಶ್ವದ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಧೋನಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯಿಂದ ವಿಶ್ವದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಪಟ್ಟಿ ಮಾಡಲಾಗಿದೆ.​
  • ಎರಡು ಬಾರಿ ಐಸಿಸಿ, ODI ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದ ಏಕೈಕ ಕ್ರಿಕೆಟರ್.​
  • ಆಗಸ್ಟ್ 2020ರಲ್ಲಿ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರ. ಧೋನಿ ಕೊನೆಯ ಪಂದ್ಯ ನ್ಯೂಜಿಲೆಂಡ್ ವಿರುದ್ಧ 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡಿದ್ದರು.
  • ಧೋನಿ ಬೈಕ್​ ಪ್ರೇಮಿ. ಅವರ ಗ್ಯಾರೇಜ್‌ ಐಷಾರಾಮಿ ಬೈಕ್​ ಹಾಗೂ ವಿಂಟೇಜ್ ಕಾರುಗಳಿಂದ ತುಂಬಿದೆ.
  • ಕ್ರಿಕೆಟ್​ಗೂ ಮೊದಲು ಧೋನಿ 2001ರಿಂದ 2003 ರವರೆಗೆ ಖರಗ್‌ಪುರ ರೈಲು ನಿಲ್ದಾಣದಲ್ಲಿ ರೈಲು ಟಿಕೆಟ್ ಪರೀಕ್ಷಕರಾಗಿ (TTE) ಆಗಿ ಕೆಲಸ ಮಾಡುತ್ತಿದ್ದರು.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!