ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಕೆರೆಯಲ್ಲಿ ಮುಳುಗಿ 7ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಸಾವು…!

ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಬಟ್ಟೆ ಒಗೆಯಲು ಕೆರೆಗೆ ತೆರಳಿದ್ದ ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ಸಮೀಪದ ಸರ್ಕಾರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರಾದ ವೈಶಾಲಿ ಹಾಗೂ ಸುನಿತಾ ಎಂದು ಗುರುತಿಸಲಾಗಿದೆ. ಇವರು ಮಲ್ಲಿಕಟ್ಟೆ ಹೆದ್ದಾರಿ ಪಕ್ಕದ ಜೋಪಡಿಯಲ್ಲಿ ವಾಸಿಸುತ್ತಿದ್ದು, ಮೂಲತಃ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿ ಪೊಲೀಸರು, ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ ದಿನೇಶ್ ಖಾರ್ವಿ ತಂಡ ಹಾಗೂ ಟೀಮ್ ಎಚ್‌ಐ ತುರ್ತು ಸ್ಪಂದನಾ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದವು. ಘಟನಾ ಸ್ಥಳಕ್ಕೆ ಆಂಬುಲೆನ್ಸ್ ಹಾಗೂ ರಕ್ಷಣಾ ತಂಡಗಳು ತಲುಪಲು ಹರಸಾಹಸ ಪಡಬೇಕಾಯಿತು. ಸ್ಥಳೀಯರೂ ಕಾರ್ಯಾಚರಣೆಗೆ ಸಹಕರಿಸಿದರು. ದಿನೇಶ್ ಕರಿಯ ಅವರು ಬಾಲಕಿಯರಿಬ್ಬರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದರು.

ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಶಾನಾಡಿ ಕೊರಗ ಕಾಲೋನಿಯಲ್ಲಿ ದುರಂತ: ಮಗಳನ್ನು ಕೊಂದು ತಾಯಿ ಆತ್ಮಹತ್ಯೆ…!

ಉಡುಪಿ: ಕೋಟ ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಸೈಕಲ್ ಸವಾರ ಸಾವು, ಕಾರು ಚಾಲಕ ಗಂಭೀರ

ಬಂಟ್ವಾಳ: ₹20 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಮಾರ್ನಬೈಲ್–ಕಾನ್ಸಾಲೆ ರಸ್ತೆ ಉದ್ಘಾಟನೆ

ಉಡುಪಿ: ಅ.24ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಮೊಬೈಲ್ ರಿಟೇಲರ್ಸ್ ಸಮಾವೇಶ

ಸುರತ್ಕಲ್: ಸುರತ್ಕಲ್‌ನಲ್ಲಿ ಶಾಲಾ ಬಸ್‌ಗೆ ಟೂರಿಸ್ಟ್ ಬಸ್ ಢಿಕ್ಕಿ: 13 ವಿದ್ಯಾರ್ಥಿಗಳಿಗೆ ಗಾಯ

ಪುತ್ತೂರು: ಪಡ್ನೂರು ಅಂಗನವಾಡಿಯಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ, ಸಂವಾದ ಕಾರ್ಯಕ್ರಮ

ಮಂಗಳೂರು: ಎಸ್‌ಐಆರ್ ವಿರುದ್ಧ ಮಂಗಳೂರಿನಲ್ಲಿ ‘ಜಂತರ್ ಮಂತರ್’ ಧರಣಿ…!

ಮಂಗಳೂರು: ಸುಲ್ತಾನ್ ಬತ್ತೇರಿಯಲ್ಲಿ ದಾಂಡಿಯಾ ಕಾರ್ಯಕ್ರಮದ ವಿರುದ್ಧ ದೂರು

ಮಂಗಳೂರಿನಲ್ಲಿ ವಿದ್ಯುತ್ ಶಾಕ್‌ಗೆ ತಾಯಿ ಮಗ ಬಳಿ…!

error: Content is protected !!