ಜನ ಮನದ ನಾಡಿ ಮಿಡಿತ

Advertisement

ಅಚ್ಚಾಗಿದೆ ತುಳು “ದೇವಿ ಮಹಾತ್ಮೆ” ಅಚ್ಚಳಿಯದೆ ಉಳಿಯಲಿದೆ ಮಹಾತ್ಮೆ

ಐಲೇಸಾದ ಮತ್ತು ಟೋಟಲ್ ಕನ್ನಡ ಲಾಂಛನದಡಿಯಲ್ಲಿ ಸಿರಿದೇವಿ ಮಹಾತ್ಮೆ  ಯಕ್ಷಗಾನ ಪ್ರಸಂಗ ಬಿಡುಗಡೆಗೆ ಸಿದ್ಧವಾಗಿದ್ದು, ತುಳು ಯಕ್ಷಗಾನ ಅಭಿಮಾನಿಗಳಿಗೆ ಈ ಪ್ರಸಂಗ  ಅಚ್ಚಾಗಿ ಉಳಿಯಲಿದೆ ಎನ್ನುವುದು ಸಂತಸದ ವಿಷಯ. 

     ಐಲೇಸಾ ಮತ್ತು ಟೋಟಲ್ ಕನ್ನಡ ಈಗಾಗಲೇ ಹಲವು ಕೃತಿಗಳನ್ನು ಬಿಡುಗಡೆಗೊಳಿಸಿದ್ದು ಪುವೆಂಪು ನೂತ್ತೊಂಜಿ ನೆಂಪು, ತುಳು ಕವನ ಸಂಕಲನ, ತುಳು ನಾಟಕ,  ಕಥಾಸಂಕಲನ ಹೀಗೆ ಹತ್ತು ಹಲವು,  ಈಗ ಸಿರಿದೇವಿ ಮಹಾತ್ಮೆ ತುಳು ಯಕ್ಷ ಪದ ಸಂಕಲನ ಬಿಡುಗಡೆಗೆ ಸಜ್ಜಾಗಿದ್ದು ತುಳು  ಯಕ್ಷಾಭಿಮಾನಿಗಳು ಸಂತಸ ಗೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಾಧ್ಯವಾಗುವಾಗಲೆಲ್ಲಾ ಯಾವುದೇ ಆಡಂಬರವಿಲ್ಲದೆ ಸಾಹಿತ್ಯದ ಕೃಷಿ ಮಾಡುತ್ತಿರುವ ಐಲೇಸಾ ಈಗ “ದಿ. ಅಗರಿ ಶ್ರೀನಿವಾಸ ಭಾಗವತರ ಮೂಲ ದೇವಿ ಮಹಾತ್ಮೆ” ಯನ್ನು ದೇವದಾಸ ಈಶ್ವರಮಂಗಲ   ತುಳುವಿಗೆ ಅನುವಾದಿಸಿದ್ದಾರೆ. 

ಖ್ಯಾತ ಯಕ್ಷ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಸಂಪಾದಿಸಿರುವ ಈ ಅಮೂಲ್ಯ ಸಂಪತ್ತನ್ನು ತುಳು ವರ್ಲ್ಡ್ ಮೀಡಿಯಾದ ಡಾ.ರಾಜೇಶ್ ಅಳ್ವ ಅವರು  ಅಚ್ಚಿಸುವ ಅಭಿಲಾಷೆಯೊಂದಿಗೆ ಐಲೇಸಾದ ಮಡಿಲಿಗಿಟ್ಟಾಗ ಅದನ್ನು ಶ್ರೀದೇವಿ ಚಿತ್ತವೆಂದು, ಚಿತ್ತ ಪ್ರಸಾದವೆಂದೂ ಟೋಟಲ್ ಕನ್ನಡದ ಸಹಯೋಗದಲ್ಲಿ  ಐಲೇಸಾ ಅಚ್ಚಿಸಿ ಈಗ ಪ್ರಕಟಿಸುತ್ತಿದೆ. 

 ಸೆಪ್ಟೆಂಬರ್ 30 ಶನಿವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರು ಪುರಭವನದಲ್ಲಿ ಶಾಸಕ ವೇದವ್ಯಾಸ ಕಾಮತ್  ಸಮಕ್ಷದಲ್ಲಿ ಲೋಕಾರ್ಪಣೆಯಾಗಲಿದೆ ಮತ್ತು ಪ್ರದರ್ಶನಗೊಳ್ಳಲಿದೆ

ಅಪೂರ್ವ ಪದ ಸಂಪತ್ತಿನ ಈ ಯಕ್ಷ ಪದ ತಮ್ಮೆಲರ ತನು ಮನ ತಂಪಾಗಿಸುವಲ್ಲಿ ಯಶಸ್ವಿಯಾಗಲಿ ಎನ್ನುವ ಪ್ರಾರ್ಥನೆಯೊಂದಿಗೆ  ಸಿರಿ ದೇವಿ ಮಹಾತ್ಮೆಯನ್ನು ಯಕ್ಷ ಅಭಿಮಾನಿಗಳಿಗರ್ಪಿಸುತ್ತಿದ್ದೇವೆ ಎಂಬುದಾಗಿ ಆಯೋಜಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ಮಂಗಳೂರು: ರಾಜಾಜಿ ಉದ್ಯಾನವನದಲ್ಲಿ ಗಾಂಧಿ ಜಯಂತಿ ಆಚರಣೆ

ಸುಳ್ಯ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸುಳ್ಯ ಪೊಲೀಸರ ವಶಕ್ಕೆ…!

error: Content is protected !!