ಜನ ಮನದ ನಾಡಿ ಮಿಡಿತ

Advertisement

ಪುತ್ತೂರಿನಲ್ಲಿ ಡಿ.23 ರಿಂದ 25ರವರೆಗೆ ರೋಟರಿ ಬಿಸಿನೆಸ್ ಎಕ್ಸ್ಪೋ

ಪುತ್ತೂರು:ಸಮಾಜ ಸೇವೆಯ ಜತೆಗೆ ವ್ಯವಹಾರಕ್ಕೆ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಸಮೃದ್ದಿ ಸಂಕೀರ್ಣದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ಡಿ.23 ರಿಂದ 25ರವರೆಗೆ ರೋಟರಿ ಬಿಸಿನೆಸ್ ಎಕ್ಸ್ಪೋ ನಡೆಯಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾದ ಡಾ. ರಾಜೇಶ್ ಬೆಜ್ಜಂಗಳ ಅವರು ಹೇಳಿದ್ದಾರೆ.

ಇವರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಒಂದು ವಸ್ತುವಿನ ಒಂದು ಸ್ಟಾಲ್‌ನಂತೆ 100 ಸ್ಟಾಲ್‌ಗಳು, ಆಹಾರ, ವಾಹನ, ವಿಶೇಷ ಗಿಪ್ಟ್ ಕೂಪನ್‌ಗಳು, ವೈದ್ಯಕೀಯ ಶಿಬಿರ, ಪ್ರತಿದಿನ ಆಕರ್ಷಕ ಬಹುಮಾನಗಳು, ರಕ್ತ ಪರಿಶೋಧನ ಶಿಬಿರ, ವ್ಯವಹಾರ ವಿಚಾರ ಸಂಕಿರಣ, ನೂತನ ಉತ್ಪನ್ನಗಳ ಬಿಡುಗಡೆ, ಮನೋರಂಜನ ಕಾರ್ಯಕ್ರಮಗಳು ನಡೆಯಲಿದೆ.

ಇನ್ನು ಡಿ. 24ರಂದು ಮಧ್ಯಾಹ್ನ 2 ಗಂಟೆಗೆ ಮುಕ್ತವಾಗಿ ಆದರ್ಶ ದಂಪತಿ ಸ್ಪರ್ಧೆ ನಡೆಯಲಿದ್ದು, ಡಿ.15ರ ಮೊದಲು ಆಸಕ್ತರು ನೊಂದಾಯಿಸಿಕೊಳ್ಳಬೇಕು. ಆದರ್ಶ ದಂಪತಿ ಸ್ಪರ್ದೆಯ ದಿನ, ಶಿವಮೊಗ್ಗದಿಂದ ಕಾಮಿಡಿ ಕಿಲಾಡಿ ಖ್ಯಾತಿಯ ಕವಿತಾ ಸುಧೀಂದ್ರ ಭಾಗವಹಿಸಲಿದ್ದಾರೆ ಎಂದು ಮಾಹಿತಿಯನ್ನ ನೀಡಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಪೂರ್ವಾಧ್ಯಕ್ಷರಾದ ರಫೀಕ್ ದರ್ಬೆ, ನವೀನ್ ಚಂದ್ರ ನಾಯಕ್, ಶಿವರಾಮ ಎನ್.ಎಸ್. ಉಪಸ್ಥಿತರಿದ್ರು.

Leave a Reply

Your email address will not be published. Required fields are marked *

ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

error: Content is protected !!