ಜನ ಮನದ ನಾಡಿ ಮಿಡಿತ

Advertisement

ಅಯೋಧ್ಯೆಯ ಪವಿತ್ರ ಅಕ್ಷತೆ ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಣೆ.

ಪುತ್ತೂರು: ಶ್ರೀ ರಾಮಜನ್ಮಭೂಮಿ ಆಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಿತು.

ಪುತ್ತೂರಿನ 45 ಉಪವಸತಿ ಕೇಂದ್ರದ ಪ್ರಮುಖರಿಗೆ ಪವಿತ್ರ ಅಕ್ಷತೆಯನ್ನು ಗುರುಪುರ ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮಿಜೀಯವರು ವಿತರಿಸಿದರು.ಬಳಿಕ ಮಾತನಾಡಿದ ಸ್ವಾಮೀಜಿಯವರು, ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮನ ಮಂದಿರ ನಿರ್ಮಾಣಗೊಂಡು ಪ್ರತಿಷ್ಠಾಪನೆಗೊಳ್ಳುವ ದಿನ ಭಾರತದ ಬಹುದೊಡ್ಡ ಪ್ರಜಾಪ್ರಭುತ್ವ ದಿನವಾಗಿದೆ.

ಈ ದಿನವನ್ನು ಹಿಂದುಗಳು ಪವಿತ್ರ ದಿನವನ್ನಾಗಿ ಆಚರಿಸಬೇಕು ಎಂದರು. ಮೊದಲ ಮೋಕ್ಷದಾಮವೇ ಅಯೋಧ್ಯೆ. ರಾಮ ಎಂಬ ಶಬ್ದಕ್ಕೆ ಆನಂದವಾಗುತ್ತದೆ. ಈಗ ಯಾವುದೇ ಸ್ವಾತಂತ್ರ್ಯ ಸಂಗ್ರಾಮ, ಹೋರಾಟಗಳಿಲ್ಕದೆ ಮಂದಿರ ನಿರ್ಮಾಣಗೊಂಡಿದೆ. ಎಲ್ಲಾ ಮನೆಗಳಲ್ಲಿ ರಾಮನಾಮ ತಾರಕ ಜಪವಗಬೇಕು. ಅಯೋಧ್ಯೆಗೆ ಎಲ್ಲರಿಗೂ ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಕೆಲವೊಂದು ನಿಯಮ ರೂಪು ರೇಸೆಗಳಂತೆ ಪಾಲ್ಗೊಳ್ಳಬೇಕು. ಅಯೋಧ್ಯೆಯ ರಾಮನಿಗೂ ಪುತ್ತೂರಿಗೂ ಕೊಂಡಿಯಾಗಬೇಕೆಂಬ ಉದ್ದೇಶದಿಂದ ಅಯೋಧ್ಯೆಯಲ್ಲಿ ಆರಾಧಿಸಿ ಸಹಸ್ರ ನಾಮಮಂತ್ರಗಳಿಂದ ಉತ್ಪ್ರೇಕ್ಷಿತ ಅಕ್ಷತೆಯನ್ನು ಪ್ರತಿ ಮನೆಗಳಿಗೂ ತಲುಪಿಸಲಾಗುತ್ತಿದೆ. ರಾಮ ಮಂದಿರ ನಿಮಾಣವಾಗುವ ಮೂಲಕ ನೈಜವಾದ ಹಿಂದು ಸಮಾಜ ನಿರ್ಮಾಣವಾಗಲಿದೆ. ಪುತ್ತೂರು ನಗರದಿಂದ 45 ಉಪವಸತಿ ಕೇಂದ್ರಗಳ ಪ್ರಮುಖರಿಗೆ ರಾಜಶೇಖರಾನಂದ ಸ್ವಾಮಿಜಿಯವರು ಅಕ್ಷತೆ ತುಂಬಿದ ಕಲಶವನ್ನು ವಿತರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ನಗರ ಸಂಘ ಚಾಲಕ ಶಿವಪ್ರಸಾದ್ ಇ, ವಿಶ್ವಹಿಂದು ಪರಿಷತ್ ಕ್ಷೇತ್ರೀಯ ಸತ್ಸಂಗ್ ಪ್ರಮುಖ್ ಮಹಾಬಲೇಶ್ವರ ಹೆಗ್ಡೆ,ಮುರಳಿಕೃಷ್ಣ ಹಸಂತಡ್ಕ,ವಿಶ್ವಹಿಂದು ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ, ಯುವರಾಜ್ ಪೆರಿಯತ್ತೋಡಿ, ಸಂತೋಷ್ ಬೋನಂತಾಯಿ ವಿಶಾಖ್ ಸಸಿಹಿತ್ಲು, ಮತ್ತಿತ್ತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ನ್ಯುಮೋನಿಯಾಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಬಿಸಿರೋಡು–ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಿಂತಿಲ್ಲ: ಕೆಎನ್‌ಆರ್‌ಸಿಎಲ್ ಸ್ಪಷ್ಟನೆ

ವಾಷಿಂಗ್ಟನ್: ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಮರುಪಾವತಿ..!

ಟೆಹ್ರಾನ್: ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟ; ಇರಾನ್ ಅಧ್ಯಕ್ಷರ ಬಹಿರಂಗ ಹೇಳಿಕೆ…!

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರರ ಸಮುದ್ರ ಪೂಜೆ; ಉತ್ತಮ ಮೀನುಗಾರಿಕೆಗೆ ಪ್ರಾರ್ಥನೆ..!

ಮಂಗಳೂರು: ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ಅಪಾಯದ ಮುನ್ಸೂಚನೆ; ಕೆತ್ತಿಕಲ್ ಗುಡ್ಡ ಮತ್ತೆ ಕುಸಿತ..!

ಬೆಳ್ತಂಗಡಿ: ಪ್ರಚೋದನಾಕಾರಿ ಭಾಷಣ ಪ್ರಕರಣ; ಎಸ್ಟಿಪಿಐ ಮುಖಂಡನಿಗೆ 6 ತಿಂಗಳ ಜೈಲು ಶಿಕ್ಷೆ…!

ಗದಗ: ಚಿಪ್ಸ್ ತರಲು ಹೋದ ಬಾಲಕಿಗೆ ಬೀದಿ ನಾಯಿಗಳ ದಾಳಿ; ಆಸ್ಪತ್ರೆಗೆ ದಾಖಲು…!

ಬಂಟ್ವಾಳ: ಮಳೆ ನೀರಿನ ಅವಾಂತರಕ್ಕೆ ಬ್ರೇಕ್; ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ…!

error: Content is protected !!