ಜನ ಮನದ ನಾಡಿ ಮಿಡಿತ

Advertisement

ಮಲ್ಪೆ: ಕಸಕ್ಕೆ ಬೆಂಕಿಯಿಡಲು ಹೋಗಿದ್ದ ವೇಳೆ ಮೈಗೆ ಬೆಂಕಿ ತಗುಲಿ ಮಹಿಳೆ ಮೃತ್ಯು

ಉಡುಪಿ: ಕಸಕ್ಕೆ ಬೆಂಕಿಯಿಡಲು ಹೋಗಿದ್ದ ವೇಳೆ ಮೈಗೆ ಬೆಂಕಿ ತಗುಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಲ್ಪೆ ಕೊಡವೂರಿನಲ್ಲಿ ನಡೆದಿದೆ.


ಮೃತರನ್ನು ಕೊಡವೂರು ನಿವಾಸಿ ಸಾರಾ ದೇವದಾಸ (63) ಎಂದು ಗುರುತಿಸಲಾಗಿದೆ. ಇವರು ಫೆ.13ರಂದು ಮನೆಯ ವಠಾರದ ಕಸದ ರಾಶಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಸಕ್ಕೆ ಸೀಮೆ ಎಣ್ಣೆ ಹಾಕುವಾಗ ಆಕಸ್ಮಿಕವಾಗಿ ಸೀಮೆಎಣ್ಣೆ ನೈಟಿಗೆ ತಾಗಿ ಸಾರಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಮನೆಯವರು ಹೊರಗೆ ಬಂದು ಬೆಂಕಿ ಆರಿಸಿ ನೋಡಿದಾಗ ಸಾರಾ ಅವರ ದೇಹ ಸಂಪೂರ್ಣ ಸುಟ್ಟು ಹೋಗಿತ್ತು. ಕೂಡಲೇ ಅವರನ್ನು ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ 11:20ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರರ ಸಮುದ್ರ ಪೂಜೆ; ಉತ್ತಮ ಮೀನುಗಾರಿಕೆಗೆ ಪ್ರಾರ್ಥನೆ..!

ಮಂಗಳೂರು: ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ಅಪಾಯದ ಮುನ್ಸೂಚನೆ; ಕೆತ್ತಿಕಲ್ ಗುಡ್ಡ ಮತ್ತೆ ಕುಸಿತ..!

ಬೆಳ್ತಂಗಡಿ: ಪ್ರಚೋದನಾಕಾರಿ ಭಾಷಣ ಪ್ರಕರಣ; ಎಸ್ಟಿಪಿಐ ಮುಖಂಡನಿಗೆ 6 ತಿಂಗಳ ಜೈಲು ಶಿಕ್ಷೆ…!

ಗದಗ: ಚಿಪ್ಸ್ ತರಲು ಹೋದ ಬಾಲಕಿಗೆ ಬೀದಿ ನಾಯಿಗಳ ದಾಳಿ; ಆಸ್ಪತ್ರೆಗೆ ದಾಖಲು…!

ಬಂಟ್ವಾಳ: ಮಳೆ ನೀರಿನ ಅವಾಂತರಕ್ಕೆ ಬ್ರೇಕ್; ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ…!

ಕೊಪ್ಪಳ: ಕೊಪ್ಪಳದಲ್ಲಿ ವಿಂಡ್ ಮಿಲ್ ಕಂಪನಿಗಳ ವಿರುದ್ಧ ರೈತರ ಆಕ್ರೋಶ; ದಬ್ಬಾಳಿಕೆ, ಮರಗಳ ನಾಶ ಆರೋಪ…!

ಅಮೆರಿಕ: 18ನೇ ವಯಸ್ಸಿನಲ್ಲೇ ಕಾಲೇಜು ಪ್ರೊಫೆಸರ್; ಗಿನ್ನೆಸ್ ವಿಶ್ವ ದಾಖಲೆ ಬರೆದ ನಾಥನ್ ಥಾಮಸ್

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

error: Content is protected !!