ಜನ ಮನದ ನಾಡಿ ಮಿಡಿತ

Advertisement

ಸಸಿಹಿತ್ಲು: ಮರುವಾಯಿ ಹೆಕ್ಕಲು ಹೋಗಿ ಅಳಿವೆಯಲ್ಲಿ ನಿರುಪಾಲಾದ ಯುವಕನಿಗೆ ತೀವ್ರ ಹುಡುಕಾಟ

ಮುಲ್ಕಿ: ಇಲ್ಲಿನ ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ನೀರುಪಾಲಾದ ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಪತ್ತೆಗಾಗಿ ಎರಡನೇ ದಿನವೂ ತೀವ್ರ ಶೋಧ ಕಾರ್ಯ ನಡೆದರೂ ಯುವಕ ಪತ್ತೆಯಾಗಿಲ್ಲ

ಬೆಳಗ್ಗಿನಿಂದಲೇ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್ ಡಿ ಆರ್ ಎಫ್) ಮತ್ತು ಉಡುಪಿಯ ಅಪದ್ಬಾಂಧವ ಈಜುಗಾರರಾದ ಈಶ್ವರ್ ಮಲ್ಪೆ ತಮ್ಮ ತಂಡದೊಂದಿಗೆ ಸಸಿಹಿತ್ಲು ಮುಂಡಾ ಬೀಚ್ ಸಮುದ್ರದ ಅಳಿವೆ ಬಾಗಿಲಿನಲ್ಲಿ ಅನೇಕ ಸಾಹಸ ನಡೆಸಿ ನೀರಿನಲ್ಲಿ ಮುಳುಗಿ ನೀರು ಪಾಲಾದವನನ್ನು ಹುಡುಕಲು ಪ್ರಯತ್ನ ಮಾಡಿದರು ಸಫಲವಾಗಿಲ್ಲ. ಸ್ಥಳದಲ್ಲಿ ಹೆಜ್ಮಾಡಿ ಕಾವಲು ಪಡೆಯ ಸಿಬ್ಬಂದಿ, ಸುರತ್ಕಲ್ ಪೊಲೀಸರು ಹಾಗೂ ಕುತೂಹಲದಿಂದ ಆಗಮಿಸಿದವರು ಬಾರಿ ಸಂಖ್ಯೆಯಲ್ಲಿ ನೆರೆದಿದ್ದರು.
ನೀರು ಪಾಲಾದ ಅಭಿಲಾಶ್ ಮನೆಯವರ ರೋಧನ ಮುಗಿಲು ಮುಟ್ಟಿದ್ದು ಸ್ಥಳದಲ್ಲಿ ಮೌನ ವಾತಾವರಣ ನೆಲೆಸಿದೆ.
ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನ ಕೆಲಸ ನಿರ್ವಹಿಸುತ್ತಿದ್ದ ಅಭಿಲಾಶ್ ಉತ್ತಮ ಈಜುಗಾರನಾಗಿದ್ದರೂ ಮಿತ್ರರ ಪ್ರಾಣ ಉಳಿಸಲು ಹೋಗಿ ನೀರು ಪಾಲಾಗಿರುವುದು ದುರದೃಷ್ಟಕರವಾಗಿದೆ ಎಂದು ಸ್ಥಳೀಯರು ಬೇಸರದಿಂದ ಹೇಳುತ್ತಿದ್ದಾರೆ.


ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಮರುವಾಯಿ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದು , ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲು ಈಜಲು ಗೊತ್ತಿದ್ದ ಅಭಿಲಾಶ್ ಮುಂದಾಗಿದ್ದು ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ
ನಿರುಪಾಲಾಗಿದ್ದಾನೆ.

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!