ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ: ಶಿಕ್ಷಣ ಕ್ಷೇತ್ರದ ಸಾಧಕರಿಗೆ ಗೌರವ ಕಾರ್ಯಕ್ರಮ

ಮುಲ್ಕಿ:ಪುನರೂರು,ತೋಕೂರು, ಕೆರೆಕಾಡು ವಲಯದ ವಿಪ್ರಸಂಪದದ ವತಿಯಿಂದ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಗೌರವ ಕಾರ್ಯಕ್ರಮ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ  ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಪ್ರಸಂಪದದ ಅಧ್ಯಕ್ಷರಾದ ಸುಧಾಕರ ರಾವ್ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಕೊರಿಯಾರ್ ಮಾತನಾಡಿ ಉತ್ತಮ ಸಂಘಟನೆಯ ಮೂಲಕ ಸೇವಾ ಕಾರ್ಯಕ್ರಮಗಳನ್ನು ನಡೆಸಿದರೆ ಸಂಸ್ಥೆಯ ಉನ್ನತಿ ಸಾಧ್ಯ ಎಂದರು

ಮುಖ್ಯ ಅತಿಥಿಗಳಾಗಿ ಚಿತ್ರಾಪುರದಲ್ಲಿ ನಡೆಯಲಿರುವ ಕೋಟಿ ಗಾಯತ್ರಿ ಜಪ ಯಜ್ಞದ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಮಾತನಾಡಿ ಎಲ್ಲಾ ವಿಪ್ರ ಬಾಂಧವರು ಅ.26 ಮತ್ತು 27ರಂದು ಚಿತ್ರಾಪುರ ಮಠದ ಆವರಣದಲ್ಲಿ ನಡೆಯಲಿರುವ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞದಲ್ಲಿ ತನು ಮನ ಧನದಿಂದ ಸಂಘಟನಾತ್ಮಕವಾಗಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು. ವೇದಿಕೆಯಲ್ಲಿ ಯುಗಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಹಿರಿಯರಾದ ಉದ್ಯಮಿ ಪಟೇಲ್ ರಾಮಮೂರ್ತಿ ರಾವ್, ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್, ಸ್ಥಾಪಕ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಕಾರ್ಯದರ್ಶಿ ಚಂದ್ರಶೇಖರ್ ರಾವ್, ಕೋಶಾಧಿಕಾರಿ ಅವಿನಾಶ್ ರಾವ್,ಯುವ ವೇದಿಕೆ ಅಧ್ಯಕ್ಷ ಶಶಾಂಕ್ ಮುಚ್ಚಿಂತಾಯ,
ಮತ್ತಿತರರು ಉಪಸ್ಥಿತರಿದ್ದರು.
ಸುಧಾಕರ್ ರಾವ್ ಸ್ವಾಗತಿಸಿದರು
ಪ್ರಾಣೇಶ್ ಭಟ್ ದೇoದಡ್ಕ ನಿರೂಪಿಸಿದರು,ಶಶಾಂಕ್ ಮುಚ್ಚಿಂತಾಯ ಧನ್ಯವಾದ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ಅರ್ಚನಾ ರಾವ್ ಕೆರೆಕಾಡು ರವರನ್ನು ಗೌರವಿಸಲಾಯಿತು ಹಾಗೂ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.

Leave a Reply

Your email address will not be published. Required fields are marked *

ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

error: Content is protected !!