ಜನ ಮನದ ನಾಡಿ ಮಿಡಿತ

Advertisement

ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದಿದ್ದ ಸಚಿವರಿಗೆ ಸಂಕಷ್ಟ – ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಸೂಚನೆ

ಬೆಂಗಳೂರು: ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌  ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಾಪಾಲರು ಸೂಚನೆ ನೀಡಿದ್ದಾರೆ.

ಸಚಿವ ಜಮೀರ್ ಅಹಮ್ಮದ್ ಹೇಳಿಕೆ ಸಂಬಂಧ ಅಡ್ವೋಕೇಟ್ ಜನರಲ್‌ಗೆ ರಾಜ್ಯಪಾಲರು ಪತ್ರ ಬರೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಕಳೆದ ಸೆಪ್ಟೆಂಬರ್‌ 24ರಂದು ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿತ್ತು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿತ್ತು.
ಕಳೆದ ಸೆಪ್ಟೆಂಬರ್‌ 25ರಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಜಮೀರ್‌ ʻನಾನು ಬಿಡಿಸಿ ಹೇಳುವಂತಿಲ್ಲ. ನಿನ್ನೆ ಬಂದಿರುವುದು ಎಲ್ಲೋ ಒಂದು ಕಡೆ ಪೊಲಿಟಿಕಲ್‌ ಜಡ್ಜ್‌ಮೆಂಟ್‌. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದರು. ಮರುದಿನ ತಮ್ಮ ಹೇಳಿಕೆ ಕುರಿತು ಕ್ಷಮೆ ಕೋರಿದ್ದರು.  ಜಮೀರ್‌ ಅವರ ಈ ಹೇಳಿಕೆ ಖಂಡಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ರಾಜ್ಯಪಾಲರಿಗೆ ದೂರು ನೀಡಿದ್ದರು. ನ್ಯಾಯಾಂಗ ನಿಂದನೆಯ ಜೊತೆಗೆ ಸಚಿವ ಜಮೀರ್ ಅಹಮದ್ ವಿರುದ್ಧ ಕ್ರಿಮಿನಲ್ ಪ್ರೊಸಿಡಿಂಗ್‌ಗೆ ರಾಜ್ಯಪಾಲರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಅಡ್ವೋಕೇಟ್ ಜನರಲ್‌ಗೆ ಪತ್ರ ಬರೆದಿರುವ ರಾಜ್ಯಪಾಲರು ಸಚಿವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

error: Content is protected !!