ಜನ ಮನದ ನಾಡಿ ಮಿಡಿತ

Advertisement

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮೇಲೆ ಆಕ್ರೋಶ..ಕಾರಣ..?

ಮಂಡಿಯೂರಿ ಕದನ ವಿರಾಮಕ್ಕೆ ಬಂದ ಪಾಕಿಸ್ತಾನಿಯರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ. ಜಂಟಿ ಕೆಳಗೆ ಬಿದ್ದರೂ, ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗೆ ಇವರ ಭಂಡತನಕ್ಕೆನೂ ಕಮ್ಮಿ ಇಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಈ ವರ್ತನೆಯೇ ಇದಕ್ಕೆ ತಾಜಾ ಉದಾಹರಣೆಯಾಗಿದೆ.

 

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪತರಗುಟ್ಟಿದ ಪಾಕಿಸ್ತಾನದಲ್ಲಿ ವಿಜಯೋತ್ಸವ ಆಚರಿಸುತ್ತಾರೆ ಅಂದ್ರೆ ಭಾರತೀಯರು ಅದ್ಯಾವ ದಿಕ್ಕಿಗೆ ತಿರುಗಿ ನಗಬೇಕೋ ನೀವೇ ಹೇಳಿ. ಶಾಹಿದ್ ಅಫ್ರಿದಿ ಅವರು ಇಂತಹ ಪುಂಡಾಟಕ್ಕೆ ಮುಂದಾಗಿದ್ದು, ಯುದ್ಧ ಗೆದ್ದಿದ್ದೇವೆ ಎಂದು ವಿಜಯೋತ್ಸವದ ಮೆರವಣಿಗೆ ಮಾಡಿದ್ದಾರೆ.ಕರಾಚಿಯಲ್ಲಿ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರು ಱಲಿ ಮಾಡಿದ್ದಾರೆ. ಅಫ್ರಿದಿ ಜೊತೆಗಿದ್ದವರು ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.ಇತ್ತೀಚೆಗೆ ಮಾತನಾಡಿದ್ದ ಶಾಹಿದ್ ಅಫ್ರಿದಿ ಅವರು ನಾವೇ ಭಾರತದ ಮೇಲಿನ ಯುದ್ಧವನ್ನು ಗೆದ್ದಿದ್ದೇವೆ. ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿಕೊಳ್ಳಲಿಲ್ಲ ಎಂದಿದ್ದರು. ಅಲ್ಲದೇ ಪಹಲ್ಗಾಮ್ ದಾಳಿಗೆ ಭಾರತವೇ ಕಾರಣ ಎಂದು ಗೂಬೆ ಕೂರಿಸಿದ್ದಾರೆ.

ಭಾರತ ಮಾಡಿದ ತಪ್ಪುಗಳಿಂದಲೇ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ. ಭಾರತವೇ ಭಾರತೀಯರನ್ನು ಕೊಲ್ಲುವಂತೆ ಮಾಡಿಕೊಂಡಿದೆ.

ಇಸ್ಲಾಂ ಧರ್ಮ ನಮಗೆ ಶಾಂತಿಯನ್ನು ಮಾತ್ರ ಬೋಧಿಸುತ್ತದೆ. ಪಾಕಿಸ್ತಾನ ಎಂದಿಗೂ ಇಂತಹ ಭಯೋತ್ಪಾದನಾ ದಾಳಿಗೆ ಬೆಂಬಲ ನೀಡುವುದಿಲ್ಲ. ಭಾರತೀಯರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ನಾವು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ಸದಾ ಪ್ರಯತ್ನ ಪಡುತ್ತೇವೆ ಎಂದು ಶಾಹಿದ್ ಅಫ್ರೀದಿ ಹೇಳಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!