ಜನ ಮನದ ನಾಡಿ ಮಿಡಿತ

Advertisement

ನವದೆಹಲಿ : ದ. ಆಫ್ರಿಕಾ ಆಟಗಾರರು ಪ್ಲೇಆಫ್ ಆಡುವುದು ಡೌಟ್

ಜೂನ್‌ 11 ರಿಂದ ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯ – ದಕ್ಷಿಣ ಆಫ್ರಿಕಾ ನಡುವೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಆರಂಭವಾಗಲಿದೆ. ಫೈನಲ್‌ ಪಂದ್ಯಕ್ಕೆ ಈಗಾಗಲೇ ಉಭಯ ತಂಡಗಳ ಪ್ರಕಟವೂ ಆಗಿದೆ. ಇದೀಗ ಐಪಿಎಲ್‌ನಲ್ಲಿ ಆಡುತ್ತಿರುವ ಎಂಟು ದಕ್ಷಿಣ ಆಫ್ರಿಕಾದ ಆಟಗಾರರು ಪ್ಲೇ ಆಫ್‌ ಪಂದ್ಯಕ್ಕೂ ಮುನ್ನ ಐಪಿಎಲ್‌ ತೊರೆಯಲಿದ್ದಾರೆ ಎಂದು ತಿಳಿದುಬಂದಿದೆ.

ಫೈನಲ್‌ ಪಂದ್ಯಕ್ಕೆ ಆಯ್ಕೆಯಾದ ಆಟಗಾರರು ಮೇ 25 ರ ಒಳಗೆ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ಹಾಜರಾಗಬೇಕೆಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಆಟಗಾರರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.ಇನ್ನೊಂದೆಡೆ ಕ್ರಿಕೆಟ್‌ ಆಸ್ಟ್ರೇಲಿಯಾ ಐಪಿಎಲ್‌ಗೆ ಮರಳುವ ಆಯ್ಕೆಯನ್ನು ಆಟಗಾರರಿಗೆ ಬಿಟ್ಟದ್ದು ಎಂದಿದೆ. ಆಟಗಾರರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಲು ನಾವು ಸಿದ್ಧ ಎಂದಿದೆ. ಹೀಗಾಗಿ ಕೆಲ ಆಸೀಸ್‌ ಆಟಗಾರರು ಮತ್ತೆ ಐಪಿಎಲ್‌ ಆಡುವುದು ಅನುಮಾನ.

ವಿಶ್ವ ಟೆಸ್ಟ್‌ ಫೈನಲ್‌ ಆಡಲಿರುವ ಕಗಿಸೊ ರಬಾಡ , ಲುಂಗಿ ಎನ್‌ಗಿಡಿ , ಟ್ರಿಸ್ಟಾನ್ ಸ್ಟಬ್ಸ್, ಐಡೆನ್ ಮಾರ್ಕ್ರಾಮ್, ರಯಾನ್ ರಿಕಲ್ಟನ್, ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್ ಮತ್ತು ವಿಯಾನ್ ಮುಲ್ಡರ್ ಮೇ 30 ರಂದು ತಂಡದ ಉಳಿದ ಆಟಗಾರರೊಂದಿಗೆ ಲಂಡನ್‌ಗೆ ಹೊರಡುವ ಮೊದಲು ದಕ್ಷಿಣ ಆಫ್ರಿಕಾಕ್ಕೆ ಮರಳಬೇಕಿದೆ. ಹೀಗಾಗಿ ಇವರೆಲ್ಲ ಪ್ಲೇ ಆಫ್‌ಗೂ ಮುನ್ನ ಐಪಿಎಲ್‌ ತಂಡಗಳಿಗೆ ಕೈಕೊಡಲಿದ್ದಾರೆ.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!