ಜನ ಮನದ ನಾಡಿ ಮಿಡಿತ

Advertisement

ಉಳ್ಳಾಲ: ಕಾರುಣ್ಯ ಫೌಂಡೇಶನ್ ನಿಂದ ಶೈಕ್ಷಣಿಕ ದತ್ತು ಸ್ವೀಕಾರ, ಸಾಧಕರಿಗೆ ಸನ್ಮಾನ

ಅಸೈಗೋಳಿಯ ಕಾರುಣ್ಯ ಫೌಂಡೇಶನ್ ವತಿಯಿಂದ ಅಸೈಗೋಳಿ ಲಯನ್ಸ್ ಸೇವಾ ಸದನದಲ್ಲಿ ಎರಡನೇ ವರ್ಷದ ‘ಕಾರುಣ್ಯೋತ್ಸವ-2025’ ಶೈಕ್ಷಣಿಕ ದತ್ತು ಸ್ವೀಕಾರ, ಸಾಧಕರಿಗೆ ಸನ್ಮಾನ, ಕಾರುಣ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ನಾವು ಉನ್ನತ ಶಿಕ್ಷಣ ಪಡೆದರೂ, ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಈ ಮಟ್ಟಕ್ಕೆ ತಲುಪಲು ಶೈಕ್ಷಣಿಕ ಜೀವನದಲ್ಲಿ ನಮಗೆ ಸಹಾಯ ಮಾಡಿದವರನ್ನೂ ನೆನಪಿಸಿಕೊಂಡು ಸಮಾಜದಲ್ಲಿ ಹಿಂದುಳಿದವರಿಗೆ ಸಹಾಯ ಮಾಡುವ ಗುಣ ಹೊಂದಿರಬೇಕು ಎಂದು ತಿಳಿಸಿದರು. ಪಾನೀರ್ ದಯಾಮಾತೆ ದೇವಾಲಯದ 21 ಅಯೋಗಗಳ ಸಂಯೋಜಕ ರೊನಾಲ್ಡ್ ಪ್ರಕಾಶ್ ಮಾತನಾಡಿ, ಮಾನವೀಯತೆ ಇರುವಲ್ಲಿ ಕರುಣೆ ಇದ್ದೇ ಇರುತ್ತದೆ, ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕಾರ್ಯಕ್ರಮ ಕರುಣೆಯ ಭಾಗ ಎಂದರು.

ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಮಾತಾನಾಡಿ, ಸಮಾಜದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬರನ್ನೂ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕು, ಉತ್ತಮ ಕಾರ್ಯ ಮಾಡುವವರಿಗೆ ಸದಾ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.  ಈ ಸಂದರ್ಭ ನಿವೃತ್ತ ಶಿಕ್ಷಕಿ ಬೆನ್ನಿ ಡಿಸೋಜ, ಸಾಮಾಜಿಕ ಮುಖಂಡ ಸುರೇಶ್ ಅಸೈ ಹಾಗೂ ರಾಷ್ಟ್ರೀಯ ವಾಲಿಬಾಲ್ ಆಟಗಾರ ಖಲೀಲ್ ಕೈರಂಗಳ ಇವರಿಗೆ ಕಾರುಣ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸ್ಸೆಸ್ಸೆಎಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ನಿಶಾ ಅಂಜುಮ್, ಪ್ರಜನ್ಯ, ಲಾವಣ್ಯ, ಮತ್ತು ಶ್ರೇಯ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ತೃಷಾ, ಭೂಮಿಕಾ ಇವರಿಗೆ ಕಾರುಣ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರುಣ್ಯ ಫೌಂಡೇಶನ್ ಗೌರವಾಧ್ಯಕ್ಷ ಆನಂದ ಕೆ.ಅಸೈಗೋಳಿ ಅಧ್ಯಕ್ಷತೆ ವಹಿಸಿದ್ದರು. ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಭಾಸ್ಕರ ಅರಸರಮೂಲೆ, ಅಸೈಗೋಳಿ ಪರಂಜ್ಯೋತಿ ಮಾತೃಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ, ಮಂಗಳಗ0ಗೋತ್ರಿ ಜೆಸಿಐ ಪೂರ್ವಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ . ಸುಮನಾ ಅಸೈಗೋಳಿ, ಹರೀಶ್ ಮಾಸ್ಟರ್ ಹಾಗೂ ಲಾವಣ್ಯ . ಕೋಶಾಧಿಕಾರಿ ಸುಧಾಕರ ನಾಯಕ್ . ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!