ಜನ ಮನದ ನಾಡಿ ಮಿಡಿತ

Advertisement

ಉಡುಪಿ: “ಇಲ್ಲ ಸಲ್ಲದ ಭಯ ಪರೀಕ್ಷೆ ಭಯ” ಕನ್ನಡ ಸಿನಿಮಾ ಬಿಡುಗಡೆ

ಮಕ್ಕಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ವಿ.ಪಿ.ಡೆಸಾ ಮಣಿಪಾಲ್ ಅವರು ನಿರ್ದೇಶಿಸಿ ನಿರ್ಮಿಸಿರುವ “ಇಲ್ಲ ಸಲ್ಲದ ಭಯ ಪರೀಕ್ಷೆ ಭಯ” ಎಂಬ ಕನ್ನಡ ಸಿನಿಮಾ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ, ನಿರ್ಮಾಪಕ ವಿ.ಪಿ. ಡೆಸಾ ಮಣಿಪಾಲ್ ಅವರು, ಈ ಚಿತ್ರವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ.

ಅದರ ಬದಲು ಎಲ್‌ಇಡಿ ಪರದೆ ಮೂಲಕ ಸಭಾಂಗಣದಲ್ಲಿ ಸಿನಿಮಾ ತೋರಿಸಲಾಗುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಉಡುಪಿಯ ಪಿಪಿಸಿ ಆಡಿಟೋರಿಯಮ್ ನಲ್ಲಿ ಪ್ರದರ್ಶನ ಮಾಡಲಾಗುವುದು. ಶೋ ಮುಗಿದ ಬಳಿಕ ಕೆರಿಯರ್ ಗೈಡೆನ್ಸ್ ನಡೆಯಲಿದ್ದು, ಸಂದರ್ಶನದ ಭಯ ಹಾಗೂ ಪರೀಕ್ಕೆ ಭಯದ ಬಗ್ಗೆ ಇತರ ಪ್ರಶ್ನೆಗಳೇನಾದರೂ ಇದ್ದಲ್ಲಿ ಉತ್ತರಿಸಲಾಗುವುದು. ಇಲ್ಲದಿದ್ದಲ್ಲಿ ಬೇಕಾದ ವಿದ್ಯಾರ್ಥಿಗಳಿಗೆ, ಸಿನೆಮಾದಲ್ಲಿ ಹೇಳಲಾದ ಸ್ಪಡಿ ಟೆಕ್ನಿಕ್ಸ್ಗಳನ್ನು ಸವಿಸ್ತಾರವಾಗಿ ವಿವರಿಸಲಾಗುವುದು ಎಂದ್ರು. ಇದು ‘ಮಕ್ಕಳು ಆತ್ಮಹತ್ಯೆ ಮಾಡುವುದು, ‘ಮನೆ ಬಿಟ್ಟು ಓಡಿ ಹೋಗುವುದು ಇಂತಹ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುವ ಪರೀಕ್ಷೆ ಹೆದರಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಯಾರಿಸಿರುವ ಶೈಕ್ಷಣಿಕ-ಸಾಮಾಜಿಕ ಚಲನಚಿತ್ರವಾಗಿದೆ. ಮನೆಯಲ್ಲಿಯೇ ಕುಳಿತು ನೋಡಲು ಅನುಕೂಲವಾಗುವಂತೆ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಅಶ್ವಿನಿ ಶೀತಲ್, ಪ್ರದೀಪ್ ಉಪಸ್ಥಿತರಿದ್ರು.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!