ವಿಟ್ಲ ಬೊಬ್ಬೆಕೇರಿ ನಿವಾಸಿ ಪ್ರಸ್ತುತ ಕಡೇಶಿವಾಲಯದಲ್ಲಿ ವಾಸವಿರುವ ವಿಟ್ಲದ ಹಿರಿಯ ಗ್ಯಾರೆಜ್ ಉದ್ಯಮಿ ರಾಮಣ್ಣ ಪೂಜಾರಿ (65) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು.

ವಿಟ್ಲದಲ್ಲಿ ಹಲವಾರು ವರ್ಷಗಳ ಕಾಲ ಬಸ್ಸು ಹಾಗೂ ಲಾರಿಯ ಗ್ಯಾರೇಜನ್ನು ನಡೆಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.



