ನೇತ್ರಾವತಿ ನದಿಯ ಒಡಲ ಮೇಲೆ ನಿರಂತರವಾಗಿ ದಾಳಿಯಾಗುತ್ತಲೇ ಇದ್ದು, ಬೇರೆ ಬೇರೆ ರೀತಿಯಲ್ಲಿ ಸವಾರಿಯಾಗುತ್ತಿರುವುದು ನಮ್ಮ ಕಣ್ಣಮುಂದಿದೆ.

ಇದೀಗ ಬಂಟ್ವಾಳ ತಾಲೂಕಿನ ಅಜಿಲಮೊಗರು ಎಂಬಲ್ಲಿ ನೇತ್ರಾವತಿ ನದಿಯನ್ನು ನುಂಗಲು ಹೊರಟಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ. ಅಜಿಲಮೊಗರು ಮಸೀದಿಯ ಪಕ್ಕಕ್ಕೆ ನೇತ್ರಾವತಿ ನದಿಗೆ ಮಣ್ಣು ತುಂಬಿಸುವ ದೃಶ್ಯ ಕಂಡು ಬಂದಿದ್ದು, ನೀರು ಹರಿದುಹೋಗುವ ನದಿಗೆ ಮಣ್ಣು ಹಾಕಿ ಅಕ್ರಮವಾಗಿ ಜಾಗವನ್ನು ಅತಿಕ್ರಮಣ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈಗಾಗಲೇ ನೂರಾರು ಲೋಡ್ ಮಣ್ಣು ನೇತ್ರಾವತಿ ನದಿ ತುಂಬಿದ್ದು, ಇದು ಕಾನೂನು ಬಾಹಿರವಾಗಿದೆ. ಹಾಗಾಗಿ ಕೂಡಲೇ ಇದರ ಕ್ರಮ ಕೈಗೊಳ್ಳಲು ಸ್ಥಳೀಯರು ಅಧಿಕಾರಿಗಳ ಗಮನ ಹರಿಸಿದ್ದಾರೆ. ನೇತ್ರಾವತಿ ನದಿಯ ಒಡಲನ್ನು ಬಿಡದ ಆರೋಪಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.



