ಜನ ಮನದ ನಾಡಿ ಮಿಡಿತ

Advertisement

ಚಿಕ್ಕಬಳ್ಳಾಪುರ: ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿಕೆ…!

 

ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ಕಳ್ಳರನ್ನು ಕೇವಲ 2 ಗಂಟೆಯಲ್ಲಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಆರಾಧ್ಯ ಹೋಟೆಲ್‌ನಲ್ಲಿ ಶಿವಶಂಕರ ಎನ್ನುವವರು ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ರು. ಇವರು ವಾಕಿಂಗ್ ಹೋಗುತ್ತಿದ್ದ ವೇಳೆ ಸಂಬ0ಧಿ ಯುವಕ ಯಶ್ವಂತ್ ಪರಿಚಯವಾಗಿದ್ದ. ಯಶ್ವಂತ್ ಅರಾಧ್ಯ ತಾನು ಯೆಲ್ಲೋ ಬೋರ್ಡ್ ಕಾರು ಇಟ್ಕಂಡಿದ್ದು ಲಕ್ಷ ಲಕ್ಷ ದುಡೀತಿದ್ದೀನಿ. ನಿಮಗೂ ಕಡಿಮೆ ಬೆಲೆಗೆ ಕಾರು ಕೊಡಿಸ್ತೀನಿ ಎಂದು ತಲೆಕೆಡಿಸಿದ್ದನು. ಈತನ ಮಾತು ನಂಬಿದ ಶಿವಶಂಕರ್ ಮನೆಯಲ್ಲಿದ್ದ ಆರೂವರೆ ಲಕ್ಷ ಹಣ ಹಾಗೂ ಒಡವೆಗಳನ್ನ ಅಡ ಇಟ್ಟು ಏಳೂವರೆ ಲಕ್ಷ ಹಣ ತಂದು ಕಾರು ತರೋಕೆ ಅಂತ ಮನೆಯಿಂದ ಅಚೆ ಬಂದಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು, ‘ಸರ್ ಈ ಅಡ್ರೆಸ್ ಎಲ್ಲಿ’ ಅಂತ ಕೇಳೋ ನೆಪದಲ್ಲಿ ಬಂದು ಕಣ್ಣಿಗೆ ಖಾರದಪುಡಿ ಎರಚಿ ಕೈಯಲ್ಲಿದ್ದ ಏಳೂವರೆ ಲಕ್ಷ ರೂಪಾಯಿ ಇದ್ದ ಬ್ಯಾಗ್ ಕಿತ್ತಕೊಂಡು ಎಸ್ಕೆಪ್ ಆಗಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!