ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಬಿಸಿಲಿನ ತಾಪ ಹಾಗೂ ಮಳೆಯ ನಡುವೆ ಬಂಟ್ವಾಳ ತಾಲೂಕಿನಲ್ಲಿ ಜ್ವರದ ಬಾದೆ….!

ಬಿಸಿಲಿನ ತಾಪ ಹಾಗೂ ಕಣ್ಣು ಮುಚ್ಚಾಳೆಯ ಮಳೆಯ ನಡುವೆ ಬಂಟ್ವಾಳ ತಾಲೂಕಿನಲ್ಲಿ ಜ್ವರದ ಬಾದೆ ಹೆಚ್ಚಾಗುತ್ತಿದೆ.

ಬಂಟ್ವಾಳ ತಾಲೂಕಿನ ನಂದಾವರ ಭಾಗದಲ್ಲಿ ಬಹುತೇಕ ಮಂದಿಗೆ ಜ್ವರದ ಲಕ್ಷಣಗಳು ಕಂಡುಬಂದಿವೆ ಎಂದು ಹೇಳಲಾಗಿದೆ. ಬಂಟ್ವಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 15 ಕ್ಕೂ ಅಧಿಕ ಮಂದಿ ಜ್ವರದ ಕಾರಣಕ್ಕಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ವೈದ್ಯರ ಪ್ರಕಾರ ಈವರೆಗೆ ಯಾವುದೇ ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ತಾಲೂಕು ವೈದ್ಯಾಧಿಕಾರಿಗಳ ತಂಡ ನಂದಾವರ, ನಂದಾವರ ಕೋಟೆ, ದಾಸರಗುಡ್ಡೆ ಪರಿಸರದಲ್ಲಿ ಡೆಂಗ್ಯೂ ಬಗ್ಗೆ ಅರಿವು – ವಿಶೇಷ ಲಾರ್ವ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದಾರೆ. ಅಲ್ಲದೆ ಡೆಂಗ್ಯೂ ನಿಯಂತ್ರಣ ಲಾರ್ವ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ಸ್ವಚ್ಚತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಜ್ವರದ ಲಕ್ಷಣಗಳು ಕಂಡು ಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಹಾಸನ: ಸಿಡಿಲು ಬಡಿದು ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ಮೃತ್ಯು..!

ಮಂಗಳೂರು : ಶ್ರೀ ಭದ್ರಕಾಳಿ ಚೆಂಡೆ ತಂಡದ ಮಾಲೀಕ ಹೃ*ದಯಾಘಾ*ತದಿಂದ ಮೃ*ತ್ಯು..!

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ಪತ್ತೆ..!

ಬೆಂಗಳೂರು: “ವಿದ್ಯಾರ್ಥಿಯ ಶಿಕ್ಷಣದ ಹಕ್ಕಿಗೆ ಧಕ್ಕೆ ಉಂಟಾಗದಂತೆ ಸಂಸ್ಥೆಗಳು ಸೂಕ್ಷ್ಮತೆಯಿಂದ ವರ್ತಿಸಬೇಕು”

ಮಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ..!

ಉಡುಪಿ: ಕ್ರಿಕೆಟ್ ಬೆಟ್ಟಿಂಗ್ ಆರೋಪಿಗೆ ಗಡಿಪಾರು ಆದೇಶ..!

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ಪಲ್ಟಿ…!

ಮಂಗಳೂರು: ರಾಜ್ಯ ಮಟ್ಟದಲ್ಲಿ ಮಿಂಚಿದ ಚಿಂತನ್ ಶೆಟ್ಟಿ…!

ಚಿಕ್ಕಬಳ್ಳಾಪುರ: ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿಕೆ…!

error: Content is protected !!