ಜನ ಮನದ ನಾಡಿ ಮಿಡಿತ

Advertisement

ಪುಂಜಾಲಕಟ್ಟೆ: ಬಿಯರ್ ಬಾಟ್ಲಿಯಿಂದ ಚಿಕ್ಕಪ್ಪನನ್ನೇ ಕೊಲೆಗೈದು ಪರಾರಿಯಾದ ಯುವಕ…!

ಯುವಕನೋರ್ವ ಚಿಕ್ಕಪ್ಪನನ್ನೇ ಬಿಯರ್ ಬಾಟ್ಲಿಯಿಂದ ಇರಿದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಸಂಭವಿಸಿದೆ.

ಇಲ್ಲಿನ ನಿವಾಸಿ ಮಧುಸೂಧನ ಅವರು ಮೃತಪಟ್ಟವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಕೊಲೆಗೈದವನಾಗಿದ್ದಾನೆ. ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ರಾಹುಲ್ ಮತ್ತಿತರರು ಮನೆಯಿಂದ ಹೊರಗೆ ಕುಡಿದು ಗದ್ದಲ ಮಾಡುತ್ತಿದ್ದರು. ಇದನ್ನು ಆಕ್ಷೇಪಿಸಿದ ಮಧುಸೂದನ್ ಅವರನ್ನು ರಾಹುಲ್ ಕೋಪದಿಂದ ಬಿಯರ್ ಬಾಟಲ್‌ನಿಂದ ಕುತ್ತಿಗೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಧುಸೂದನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಮೃತರು ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರು. ರಾಹುಲ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತದೇಹವನ್ನುಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದ್ದು, ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಿಸರದಲ್ಲಿ ಯುವಕರು ಗಾಂಜಾ ಸೇವಿಸುತ್ತಿದ್ದು, ಅದರ ಪರಿಣಾಮದಿಂದ ಕೊಲೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!