ಬಂಟ್ವಾಳ ತಾಲೂಕಿನ ನಲ್ಕೆಮಾರ್ ಎಂಬಲ್ಲಿ ದೊಡ್ಡ ಮರವೊಂದು ಬುಡಮೇಲಾಗಿ ಉರುಳಿ ರಸ್ತೆಗೆ ಬಿದ್ದಿದೆ.

ನಿರಂತರ ಮಳೆಯಿಂದಾಗಿ ಬುಡದ ಮಣ್ಣು ಸಡಿಲಗೊಂಡು ರಾತ್ರಿ ವೇಳೆ ಮರ ಉರುಳಿದೆ. ಹತ್ತಿರದಲ್ಲೆಯೇ ನಲ್ಕೆಮಾರ್ ಸರಕಾರಿ ಶಾಲೆ ಇದೆ. ಸಾರ್ವಜನಿಕರು ಸಂಚಾರಕ್ಕೆ ಕರ್ನಾಟಕ ಗೃಹ ಮಂಡಳಿ ಬಡಾವಣೆಯ ರಸ್ತೆ ಬಳಸುತ್ತಿರುವುದರಿಂದ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗಿಲ್ಲ.



