ಬೆಳಗಾವಿಯ ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಕ್ಲಬ್ ನಲ್ಲಿ ರಮ್ಮಿ ಆಡುತ್ತಿದ್ದ ವ್ಯಕ್ತಿಯ ಮೇಲೆ ಫೈರಿಂಗ್ ನಡೆದಿದೆ.

ಬೆಳಗಾವಿ ನಗರದ ಜಿಮಖಾನ್ ಕ್ಲಬ್‌ನಲ್ಲಿ ದುಷ್ಕರ್ಮಿಗಳು ಸುರೇಶ್ ಜಾಲಗಾರ ಎಂಬಾತನ ತಲೆಗೆ ಗನ್ ನಿಂದ ಕುಕ್ಕಿ ಬಳಿಕ ಫೈರಿಂಗ್ ನಡೆಸಿದ್ದಾರೆ. ಫೈರಿಂಗ್ ಆಗುವ ಮುನ್ನವೇ ಸುರೇಶ್ ದುಷ್ಕರ್ಮಿಗಳನ್ನು ತಳ್ಳಿ ಎಸ್ಕೇಪ್ ಆಗಿದ್ದಾರೆ. ಸುರೇಶ್ ಪರಾರಿಯಾದ ಬಳಿಕ ಹೊರ ಬಂದು ದುಷ್ಕರ್ಮಿಗಳು ಮತ್ತೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಐದು ಜನರ ತಂಡ ಜಿಮ್ ಖಾನ ಕ್ಲಬ್ ಗೆ ಬಂದಿತ್ತು. ಇಬ್ಬರು ಹೊರ ನಿಂತಿದ್ದರೆ, ಮೂರು ಜನರು ಒಳ ಬಂದು ಹತ್ಯೆಗೆ ಯತ್ನ ನಡೆಸಿದ್ದರು. ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ಈ ಹಿಂದೆ ಸುರೇಶ್ ಜಾಲಗಾರ ಫೈರಿಂಗ್ ಮಾಡಿದ್ದ. ಇದರ ಸೇಡು ತೀರಿಸಿಕೊಳ್ಳಲು ಇಂದು ಪ್ರಫುಲ್ ಪಾಟೀಲ್ ತನ್ನ ಕಡೆಯ ಹುಡುಗರಿಂದ ಹತ್ಯೆಗೆ ಯತ್ನ ಮಾಡಿದ್ದಾರೆನ್ನಲಾಗಿದೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



